11 ಲಕ್ಷ ವಿದ್ಯಾರ್ಥಿಗಳಿಗೆ ವಿದ್ಯಾನಿಧಿ ಸ್ಕಾಲರ್​ ಶಿಪ್ ➤ ಸಿಎಂ ಬೊಮ್ಮಾಯಿ ಘೋಷಣೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ. 31. ಪ್ರತಿ ವರ್ಷವೂ ಸಹ ವಿದ್ಯಾರ್ಥಿಗಳಿಗೆ ವಿದ್ಯಾನಿಧಿ ಸ್ಕಾಲರ್​ ಶಿಪ್​ ನೀಡಲಾಗುತ್ತಿದೆ. ಅದರಂತೆ ಈ ವರ್ಷವೂ ಸಹ ಅತಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳಿಗೆ ಸ್ಕಾಲರ್​ ಶಿಪ್​ ನೀಡುವುದಾಗಿ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

 

ಮುಂದಿನ‌ ದಿನಗಳಲ್ಲಿ ಮೀನುಗಾರರ ಮಕ್ಕಳಿಗೂ ವಿಶೇಷ ವಿದ್ಯಾರ್ಥಿ ವೇತನ ನೀಡಲಾಗುವುದು, ಕುಂಬಾರರು ಸೇರಿದಂತೆ ಹಲವರಿಗೆ 50 ಸಾವಿರ ರೂ.‌ ಕಾಯಕ ಯೋಜನೆಯಡಿ‌ ಈಗಾಗಲೇ ನೀಡಿದ್ದೇವೆ. ರೈತ ಮತ್ತು ದುಡಿಯುವ ವರ್ಗ ಆರ್ಥಿಕವಾಗಿ ಸಬಲರಾಗಬೇಕು. ಇದಕ್ಕೆ‌ ನಮ್ಮ ಸರ್ಕಾರ ಸದಾ‌ ಬೆಂಬಲ ನೀಡಲಿದೆ. ಈ ರೀತಿ ಬೆಂಬಲ ನೀಡಿದಾಗ ‌ದೇಶ ಅಭಿವೃದ್ಧಿ ಆಗಲು ಸಾಧ್ಯ ಎಂದು  ಹೇಳಿದ್ದಾರೆ. ಈಗಾಗಲೇ 11 ಲಕ್ಷ ಮಕ್ಕಳಿಗೆ ವಿದ್ಯಾನಿಧಿ‌ ಕೊಡಲಾಗಿದೆ. ಇನ್ನು ಮುಂದಿನ ದಿನಗಳಲ್ಲೂ ಸಹ ಪ್ರತಿಯೊಬ್ಬರಿಗೂ ಸಹಾಯವಾಗುವಂತೆ. ಎಲ್ಲಾ ಕಾರ್ಮಿಕರ ಮಕ್ಕಳಿಗೂ ಸಹ ವಿದ್ಯಾರ್ಥಿ ವೇತನ ನೀಡುವ ಭರವಸೆ ಕೊಟ್ಟಿದ್ದಾರೆ.

Also Read  ಕನ್ನಡ ಸಿನಿಮಾ ನಿರ್ದೇಶಕ ಕೆಆರ್​ ಮುರಳಿ ಕೃಷ್ಣ ನಿಧನ

 

error: Content is protected !!
Scroll to Top