ಹಾಸನ: ಕೆಎಸ್ಸಾರ್ಟಿಸಿ ಬಸ್ – ಖಾಸಗಿ ಬಸ್ ಢಿಕ್ಕಿ ► ಮೂವರು ಮೃತ್ಯು, 25 ಕ್ಕೂ ಅಧಿಕ ಮಂದಿಗೆ ಗಾಯ

(ನ್ಯೂಸ್ ಕಡಬ) newskadaba.com ಹಾಸನ, ಡಿ.05. ಕೆಎಸ್ಸಾರ್ಟಿಸಿ ಬಸ್ ಹಾಗೂ ಖಾಸಗಿ ಬಸ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಇಬ್ಬರು ಮೃತಪಟ್ಟು 25 ಕ್ಕೂ ಅಧಿಕ ಮಂದಿ ಗಾಯಗೊಂಡ ಘಟನೆ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75 ರ ಆಲೂರು ಠಾಣಾ ವ್ಯಾಪ್ತಿಯ ಯದ್ದುರ್ಗ ಎಂಬಲ್ಲಿ ಮಂಗಳವಾರ ಬೆಳಗ್ಗಿನ ಜಾವ ನಡೆದಿದೆ.

ಮೃತರನ್ನು ಫಾತಿಮಾ(27), ಅಬ್ದುಲ್ ಸಲಾಂ(54) ಎಂದು ಗುರುತಿಸಲಾಗಿದ್ದು, ಇನ್ನೊಬ್ಬರ ಹೆಸರು ತಿಳಿದುಬಂದಿಲ್ಲ. ನಸುಕಿನ ಜಾವ 2.30. ಗಂಟೆಯ ಸುಮಾರಿಗೆ ಕೆಎಸ್ಆರ್‌ಟಿಸಿ ಅಂಬಾರಿ ಸ್ಲೀಪರ್ ಕೋಚ್ ಬಸ್‌ ಮತ್ತು ದುರ್ಗಾಂಬಾ ಸ್ಲೀಪರ್ ಕೋಚ್ ಖಾಸಗಿ ಬಸ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ.

Also Read  ಭಾನುವಾರದ ಕೊರೋನಾ ಕರ್ಫ್ಯೂ ➤ ಈ ಭಾನುವಾರ ಲಾಕ್ಡೌನ್ನಲ್ಲಿ ಏನಿರುತ್ತೆ ಏನಿರಲ್ಲ?

ದುರ್ಘಟನೆಯಲ್ಲಿ 25 ಕ್ಕೂ ಹೆಚ್ಚು ಮಂದಿ ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಆಲೂರು ತಾಲೂಕು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!
Scroll to Top