ಲವ್ ಜಿಹಾದ್ ತಡೆಗೆ ಸಹಾಯವಾಣಿ ಆರಂಭಿಸಿದ ಭಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ಸಂಘಟನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 31. ಲವ್ ಜಿಹಾದ್ ಪ್ರಕರಣಗಳನ್ನು ತಡೆಗಟ್ಟಲು ಭಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ಮಂಗಳೂರಿನಲ್ಲಿ ಸಹಾಯವಾಣಿ ಆರಂಭಿಸಿದೆ ಎಂದು ವರದಿ ತಿಳಿಸಿದೆ.

ತಮ್ಮ ಮನೆಯಲ್ಲಿ, ನೆರೆಹೊರೆಗಳಲ್ಲಿ, ಊರು ಹಳ್ಳಿಗಳಲ್ಲಿ ಲವ್ ಜಿಹಾದ್ ಪ್ರಕರಣ ಕಂಡುಬಂದರೆ ಅಥವಾ ಲವ್ ಜಿಹಾದ್ ಗೆ ಬಲಿಯಾದ್ರೆ ತುರ್ತಾಗಿ ಸಂಪರ್ಕಿಸಲು ಎರಡು ವಾಟ್ಸ್ ಆ್ಯಪ್ ಸಂಖ್ಯೆಗಳನ್ನು ನೀಡಲಾಗಿದೆ. ಜೊತೆಗೆ ಇಮೇಲ್ ಐಡಿಯನ್ನು ನೀಡಲಾಗಿದೆ. ಕರೆ ಮಾಡಿದವರ ಮಾಹಿತಿ ಗೌಪ್ಯವಾಗಿ ಇಡಲಾಗುತ್ತದೆ ಎಂದು ಸಂಘಟನೆಗಳ ಪ್ರಮುಖರು ಹೇಳಿದ್ದಾರೆ. ಪೋಷಕರು ಲವ್ ಜಿಹಾದ್ ಬಗ್ಗೆ ಎಚ್ಚರ ವಹಿಸಿ, ಮಕ್ಕಳ ಬಗ್ಗೆ ಸಂಶಯವಿದ್ದಲ್ಲಿ ಸಂಕೋಚಪಡದೇ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ. ಹಾಗೆಯೇ “ಲವ್ ಜಿಹಾದ್ ಮುಕ್ತ ಹಿಂದೂ ಸಮಾಜ ನಮ್ಮ ಗುರಿ“ ಎಂಬ ಪೋಸ್ಟರ್ ಎಲ್ಲೆಡೆ ವೈರಲ್ ಆಗುತ್ತಿದೆ.

Also Read  ಟಿಕೆಟ್ ರಹಿತ ಪ್ರಯಾಣ - 7.83 ಲಕ್ಷ ರೂ. ದಂಡ ವಸೂಲಿ ಮಾಡಿದ BMTC

 

 

error: Content is protected !!
Scroll to Top