ಭಾರತೀಯ ಕ್ರಿಕೆಟರ್ ರಿಷಬ್ ಪಂತ್ ಮುಖಕ್ಕೆ ಪ್ಲಾಸ್ಟಿಕ್ ಸರ್ಜರಿ…!

(ನ್ಯೂಸ್ ಕಡಬ) newskadaba.com ಹೊಸದಿಲ್ಲಿ, ಡಿ. 31. ಉತ್ತರಾಖಂಡ್‌ ನ ರೂರ್ಕಿ ಬಳಿ ನಡೆದ ಭೀಕರ ಕಾರು ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಭಾರತೀಯ ಕ್ರಿಕೆಟರ್ ರಿಷಬ್ ಪಂತ್ ಅವರ ಮೆದುಳು ಹಾಗೂ ಬೆನ್ನುಮೂಳೆಯ ಎಂಆರ್‌ಐ ಫಲಿತಾಂಶಗಳು ಸಾಮಾನ್ಯವಾಗಿದ್ದು, ಅವರ ಅವರ ಮುಖಕ್ಕೆ ಆದ ಗಾಯಗಳು ಹಾಗೂ ಸವೆತಗಳಿಗೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿರುವುದಾಗಿ ಮಾಧ್ಯಮ ವರದಿಯೊಂದು ತಿಳಿಸಿದೆ.


ಭಾರತದ ಸ್ಟಾರ್ ವಿಕೆಟ್‌ ಕೀಪರ್ ರಿಷಬ್ ಪಂತ್ ಅವರು, ಚಲಾಯಿಸುತ್ತಿದ್ದ ಕಾರು ರಸ್ತೆಯ ತಡೆಗೋಡೆಗೆ ಡಿಕ್ಕಿ ಹೊಡೆದ ಕೆಲವೇ ನಿಮಿಷಗಳಲ್ಲಿ ಬೆಂಕಿ ಹೊತ್ತಿಕೊಂಡಿದೆ. ಗಂಭೀರ ಗಾಯಗಳ ಹೊರತಾಗಿಯೂ ಪಂತ್, ತನ್ನ ಕಾರಿನ ಗಾಜಿನ ಕಿಟಕಿಯನ್ನು ಒಡೆದು ಮಾರಣಾಂತಿಕ ಅಪಘಾತದಿಂದ ತಪ್ಪಿಸಿಕೊಂಡಿದ್ದರು.

Also Read  ಆಟೋ ರಿಕ್ಷಾ ಢಿಕ್ಕಿ ಹೊಡೆದು ಗರ್ಭಿಣಿ ಮೃತ್ಯು

error: Content is protected !!
Scroll to Top