ವಿಟ್ಲ: ಆಡು ಕಳ್ಳತನ ಮಾಡುತ್ತಿದ್ದ ಯುವಕರು ಪೊಲೀಸ್ ವಶಕ್ಕೆ…!

crime, arrest, suspected

(ನ್ಯೂಸ್ ಕಡಬ) newskadaba.com ವಿಟ್ಲ, ಡಿ. 31. ಆಡುಗಳನ್ನು ಕಳ್ಳತನ ಮಾಡುತ್ತಿದ್ದ ಇಬ್ಬರು ಯುವಕರನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ವಿಟ್ಲದಲ್ಲಿ ನಡೆದಿದೆ.

 


ಇಲ್ಲಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಳೆದ ಮೂರು ನಾಲ್ಕು ತಿಂಗಳಿನಿಂದ ಗುಡ್ಡಕ್ಕೆ ಮೇಯಲು ಬಿಟ್ಟ ಆಡುಗಳು ನಾಪತ್ತೆಯಾಗುತ್ತಿತ್ತು. ಈ ಬಗ್ಗೆ ಎಚ್ಚೆತ್ತ ನಾಗರಿಕರು ಕಳ್ಳರನ್ನು ಪತ್ತೆಗಾಗಿ ಕಾದುಕುಳಿತಿದ್ದರು. ಡಿ‌. 30ರ ಶುಕ್ರವಾರದಂದು ಸಾಯಂಕಾಲ ವೇಳೆ ಮರಕ್ಕಿಣಿಯಿಂದ ಆಡು ಕಳ್ಳತನ ಮಾಡಿ ಬರುತ್ತಿದ್ದ ಯುವಕರಿಬ್ಬರನ್ನು ಕೇಪು ಕಲ್ಲಂಗಳ ದ್ವಾರ ಸಮೀಪ ಸಾರ್ವಜನಿಕರ ತಂಡ ಹಿಡಿದು ಬಳಿಕ ವಿಟ್ಲ ಪೊಲೀಸರ ವಶಕ್ಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

Also Read  ಪಾದಚಾರಿಗೆ ಅಪಘಾತ

error: Content is protected !!
Scroll to Top