ಸುಳ್ಯ: ಪಾದಚಾರಿಗೆ ಅಪರಿಚಿತ ವಾಹನ ಢಿಕ್ಕಿ ಹೊಡೆದು ಪರಾರಿ ➤ ವ್ಯಕ್ತಿ ಗಂಭೀರ

(ನ್ಯೂಸ್ ಕಡಬ) newskadaba.com ಸುಳ್ಯ, ಡಿ. 31. ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಗೆ ಅಪರಿಚಿತ ವಾಹನವೊಂದು ಢಿಕ್ಕಿ ಹೊಡೆದು ಪರಾರಿಯಾದ ಘಟನೆ ಮಂಗಳೂರು- ಮೈಸೂರು ರಾ. ಹೆದ್ದಾರಿಯ ಪೆರಾಜೆ ಎಂಬಲ್ಲಿ ನಡೆದಿದೆ.

ವ್ಯಕ್ತಿಯೋರ್ವರು ಅಡಿಕೆ ಕೊಯ್ಯುವ ಕೆಲಸ ಮುಗಿಸಿ, ವಾಪಾಸ್ ಮನೆಗೆ ಹಿಂತಿರುಗುತ್ತಿದ್ದ ವೇಳೆ ಅತಿವೇಗದಲ್ಲಿ ಬಂದ ಅಪರಿಚಿತ ವಾಹನ ಢಿಕ್ಕಿ ಹೊಡೆದಿದ್ದು, ಚಾಲಕ ವಾಹನವನ್ನು ನಿಲ್ಲಿಸದೇ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಗಂಭೀರ ಗಾಯಗೊಂಡ ವ್ಯಕ್ತಿಯನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತಕ್ಕೆ ಹದರಿದ ಗಾಯಾಳು ಊರಿನ ಹೆಸರು ಮಾತ್ರ ಹೇಳುತ್ತಿದ್ದು, ಹೆಸರು ಹೇಳುವ ಪರಿಸ್ಥಿತಿಯಲ್ಲಿ ಇರಲಿಲ್ಲ ಎಂದೆನ್ನಲಾಗಿದೆ.

Also Read  ಜ. 08ರವರೆಗೆ ಕಡಬ ತಾಲೂಕು ಭೂಮಿ ಕೇಂದ್ರದಲ್ಲಿ ಆರ್.ಟಿ.ಸಿ. ವಿತರಣೆ ಸ್ಥಗಿತ

error: Content is protected !!
Scroll to Top