ದತ್ತಜಯಂತಿ ಆಚರಣೆಯ‌‌ ನಂತರ ಪೆಟ್ರೋಲ್ ಬಾಂಬ್ ಪ್ರಯೋಗ ► 5 ಪೆಟ್ರೋಲ್ ಬಾಂಬ್ ಸಹಿತ 13 ಮಂದಿ ವಶಕ್ಕೆ: ಎಸ್ಪಿ ಅಣ್ಣಾಮಲೈ

(ನ್ಯೂಸ್ ಕಡಬ) newskadaba.com ಚಿಕ್ಕಮಗಳೂರು, ಡಿ.4. ದತ್ತಜಯಂತಿಯ ಕೊನೆಯ ದಿನವಾದ ರವಿವಾರದಂದು ಅಹಿತಕರ ಘಟನೆಗಳು ನಡೆಯದಂತೆ ನಗರದಲ್ಲಿ ರಾತ್ರಿ ಗಸ್ತು ತಿರುಗುತ್ತಿದ್ದ ಪೊಲೀಸರ ಮೇಲೆಯೇ ಪೆಟ್ರೋಲ್ ಬಾಂಬ್ ಪ್ರಯೋಗ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 13 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಚಿಕ್ಕಮಗಳೂರು ಜಿಲ್ಲಾ ಎಸ್ಪಿ ಕೆ.ಅಣ್ಣಾಮಲೈ ತಿಳಿಸಿದ್ದಾರೆ.

ಅವರು ಸೋಮವಾರ ನಗರ ಪೊಲೀಸ್ ಠಾಣೆಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ನಗರದ ತಮಿಳು ಕಾಲನಿಯ ಬಳಿಯ ಮಾರ್ಕೆಟ್ ರಸ್ತೆಯಲ್ಲಿ ಪೊಲೀಸರು ರಾತ್ರಿ ಸಮಯದಲ್ಲಿ ಗಸ್ತು ತಿರುಗುತ್ತಿದ್ದ ವೇಳೆ ಕಿಡಿಗೇಡಿಗಳು ಸಾರಾಯಿ ಬಾಟಲ್‍ನಲ್ಲಿ ಪೆಟ್ರೋಲ್ ಹಾಗೂ ಬಟ್ಟೆ ಸುತ್ತಿ ತಯಾರಿಸಿದ್ದ ಪೆಟ್ರೋಲ್ ಬಾಂಬ್ ಒಂದನ್ನು ಪೊಲೀಸರ ಮೇಲೆಯೇ ಪ್ರಯೋಗ ಮಾಡಿದ್ದಾರೆ. ಈ ಸಮಯದಲ್ಲಿ ಸುಮಾರು ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಸುಮಾರು ಐದು ಪೆಟ್ರೋಲ್ ಬಾಂಬ್‍ಗಳನ್ನು ವಶಕ್ಕೆ ಪಡೆದಿದ್ದು, ಈ ಸಂಬಂಧ 9 ಮಂದಿ ಯುವಕರು ಮತ್ತು 4 ಮಂದಿ ಅಪ್ರಾಪ್ತರ ಸಹಿತ ಒಟ್ಟು 13 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ ಎಂದು ಮಾಹಿತಿ ನೀಡಿದರು.

ದತ್ತ ಜಯಂತಿ ಆಚರಣೆ ವೇಳೆ ನಡೆದ ಘಟನೆಗಳಿಗೆ ಸಂಬಂಧಿಸಿದಂತೆ 32 ಜನರನ್ನು ವಶಕ್ಕೆ ಪಡೆಯಲಾಗಿದ್ದು, ನಾಲ್ಕು ಪ್ರಕರಣ ದಾಖಲು ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದರು.

Also Read  ಹೆಚ್ಚುತ್ತಿದೆ ಚರ್ಮಗಂಟು ರೋಗದ ಹಾವಳಿ ➤ ರಾಜ್ಯ ರಾಜಧಾನಿಯಲ್ಲಿ 21 ಸಾವಿರ ಜಾನುವಾರುಗಳು ಬಲಿ

error: Content is protected !!
Scroll to Top