ಶೂಟ್ ಮಾಡಿ ಜಿಮ್ ಮಾಲೀಕನ ಹತ್ಯೆ ➤ ಪೊಲೀಸರ ಹಾದಿ ತಪ್ಪಿಸಲು ಸಿಸಿಟಿವಿಯನ್ನೇ ಹೊತ್ತೊಯ್ದ ದುಷ್ಕರ್ಮಿಗಳು

(ನ್ಯೂಸ್ ಕಡಬ) newskadaba.com ನವದೆಹಲಿ, ಡಿ. 31. ಜಿಮ್ ಮಾಲಕರೊಬ್ಬರನ್ನು ಶೂಟ್ ಮಾಡಿ ಹತ್ಯೆಗೈದ ಘಟನೆ ದೆಹಲಿಯ ಪ್ರೀತ್ ವಿಹಾರ್ ನಲ್ಲಿ ನಡೆದಿದೆ.

ಹತ್ಯೆಯಾದವರನ್ನು ಮಹೇಂದ್ರ ಅಗರ್ವಾಲ್ ಎಂದು ಗುರುತಿಸಲಾಗಿದೆ. ಅಗರ್ವಾಲ್ ಎನರ್ಜಿ ಜಿಮ್, ಸ್ಪಾ ಹಾಗೂ ಜಿಮ್ ಗೆ ಸಂಬಂಧಿಸಿದ ಅಂಗಡಿಯನ್ನು ಹೊಂದಿದ್ದು, ಶುಕ್ರವಾರದಂದು ರಾತ್ರಿ ಎಂಟು ಗಂಟೆಯ ವೇಳೆ ಗನ್ ಹಿಡಿದುಕೊಂಡು ಬಂದ ಅಪರಿಚಿತರು ಶೂಟ್ ಮಾಡಿ ಹತ್ಯೆಗೈದಿದ್ದಾರೆ. ಅಲ್ಲದೇ ಪೊಲೀಸರ ಹಾದಿ ತಪ್ಪಿಸಲು ಘಟನಾ ಸ್ಥಳದಲ್ಲಿನ ಸಿಸಿಟಿವಿಯನ್ನು ದುಷ್ಕರ್ಮಿಗಳು ಹೊತ್ತೊಯ್ದಿದ್ದಾರೆ ಎನ್ನಲಾಗಿದೆ.

Also Read  ರಾಜ್ಯದಲ್ಲಿ ಸಿಡಿಲಿನ ಅಬ್ಬರಕ್ಕೆ ಬಲಿಯಾದವರ ಸಂಖ್ಯೆ 15ಕ್ಕೆ ಏರಿಕೆ..!     

error: Content is protected !!
Scroll to Top