ಬಂಟ್ವಾಳ: ವ್ಯಕ್ತಿಗೆ ಪರಿಚಿತ ಗ್ಯಾಂಗ್ ನಿಂದ ಹಲ್ಲೆ ➤ ವ್ಯಕ್ತಿ ಗಂಭೀರ

Crime

(ನ್ಯೂಸ್ ಕಡಬ) newskadaba.com ಬಂಟ್ವಾಳ, ಡಿ. 30. ವ್ಯಕ್ತಿಯೊಬ್ಬರಿಗೆ ಪರಿಚಿತ ತಂಡವೊಂದು ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಇಲ್ಲಿನ ಕುಮ್ದೇಲು ಎಂಬಲ್ಲಿ ನಡೆದಿದೆ.

ಹಲ್ಲೆಗೊಳಗಾದವರನ್ನು ನಿತೇಶ್ ಮಡಿವಾಳ ಎಂದು ಗುರುತಿಸಲಾಗಿದೆ. ಅವರಿಗೆ ಲೋಕೇಶ್, ರೋಷನ್, ಸುಜಿತ್ ಹಾಗೂ ಸುಮಂತ್ ಎಂಬವರು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಗಾಯಾಳುವನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಗಳೆಲ್ಲ ನಿತೇಶ್ ಅವರಿಗೆ ಪರಿಚಿತರಾಗಿದ್ದು, ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಈ ಕುರಿತು ಬಂಟ್ವಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಸಾವಯವ ಗೊಬ್ಬರದತ್ತ ರೈತರ ಒಲವು   ➤ ಸಗಣಿಗೂ ಬಂತು ಬಂಗಾರದ ಬೆಲೆ…!

error: Content is protected !!
Scroll to Top