ಬೈಕ್ ಟ್ಯಾಂಕ್ ಮೇಲೆ ಯುವತಿಯನ್ನು ಕುಳ್ಳಿರಿಸಿ ಜಾಲಿ ರೈಡ್ ಹೋದ ಯುವಕ- ಅಂದರ್ ➤ ವಿಡಿಯೋ ವೈರಲ್

(ನ್ಯೂಸ್ ಕಡಬ) newskadaba.com ಆಂಧ್ರಪ್ರದೇಶ, ಡಿ. 30. ಹಾಡಹಗಲೇ ಯುವಕನೋರ್ವ ಅಸಭ್ಯ ರೀತಿಯಲ್ಲಿ ಬೈಕ್ ಟ್ಯಾಂಕ್ ಮೇಲೆ ಯುವತಿಯನ್ನು ಕೂರಿಸಿಕೊಂಡು ಹೋಗಿರುವ ಘಟನೆ ಆಂದ್ರಪ್ರದೇಶದ ವಿಶಾಖಪಟ್ಟಣಂನ ಪ್ರಧಾನ ಮಂತ್ರಿ ರಸ್ತೆಯಲ್ಲಿ ನಡೆದಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ  ವೈರಲ್ ಆಗಿದೆ.

ವಿಡಿಯೋ ವೈರಲ್ ಆದ ಬೆನ್ನಲ್ಲೇ ಪೊಲೀಸರು ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ಯುವಕ ಮತ್ತು ಯುವತಿಯನ್ನು ವಶಕ್ಕೆ ಪಡೆದು, ಅವರಿಬ್ಬರ ವಿರುದ್ಧ ಪ್ರಕರಣ ದಾಖಲಿಸಿ ವಾಹನವನ್ನು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.

Also Read  ಇಪ್ಪತ್ತೆರಡು ಲಕ್ಷ ರೂ‌‌. ಬೆಲೆಯ ಬೈಕ್ ಅಪಘಾತ ► ದುಬಾರಿ ಬೆಲೆಯ ಹೆಲ್ಮೆಟ್ ತೆಗೆಯಲಾಗದೆ ಸವಾರ ಮೃತ್ಯು

error: Content is protected !!
Scroll to Top