ತಪ್ಪಾಗಿ ಬರೆದಳೆಂದು ವಿದ್ಯಾರ್ಥಿನಿಯ ಕೈಮೂಳೆ ಮುರಿದ ಶಿಕ್ಷಕ…!

(ನ್ಯೂಸ್ ಕಡಬ) newskadaba.com ಭೋಪಾಲ್, ಡಿ. 30. ಗಿಳಿ ಎಂಬ ಪದವನ್ನು ಸರಿಯಾಗಿ ಬರೆಯದಕ್ಕೆ ಕೋಪಗೊಂಡ ಟ್ಯೂಶನ್ ಶಿಕ್ಷಕರೊಬ್ಬರು ಐದು ವರ್ಷದ ಬಾಲಕಿಯ ಕೈ ತಿರುವಿದ ಪರಿಣಾಮ ಬಾಲಕಿಯ ಕೈ ಮೂಳೆ ಮುರಿದ ಘಟನೆ ಭೋಪಾಲ್ ನಲ್ಲಿ ನಡೆದಿದೆ.

ಘಟನೆ ಸಂಬಂಧ ಶಿಕ್ಷಕ ಪ್ರಯಾಗ್ ವಿಶ್ವಕರ್ಮ ಎಂಬಾತನನ್ನು ಬಂಧಿಸಲಾಗಿದೆ. ಶಿಕ್ಷಕ ಬಾಲಕಿಯೊಂದಿಗೆ ಗಿಳಿ ಎಂಬುದಾಗಿ ಬರೆಯಲು ಹೇಳಿದ್ದು, ಆದರೆ ಈ ಪದವನ್ನು ಬರೆಯಲು ಬಾಲಕಿಗೆ ಸಾಧ್ಯವಾಗಿಲ್ಲ. ಇದರಿಂದ ಕುಪಿತಗೊಂಡ ಶಿಕ್ಷಕ ಆಕೆಯ ಕಪಾಳಕ್ಕೆ ಹೊಡೆದು ಬಳಿಕ ಕೈಯನ್ನು ತಿರುವಿದ್ದಾನೆ. ಕೈ ತಿರುವಿದ ರಭಸಕ್ಕೆ ಬಾಲಕಿಯ ಕೈ ಮೂಳೆ ಮುರಿದು ಹೋಗಿದೆ ಎಂದು ಹಬೀಬ್‌ಗಂಜ್ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಮನೀಶ್ ರಾಜ್ ಸಿಂಗ್ ಭದೌರಿಯಾ ತಿಳಿಸಿದ್ದಾರೆ. ಈ ಕುರಿತು ಬಾಲಕಿಯ ಮನೆಯವರು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.

Also Read  ಐಪಿಎಲ್ ನಿಂದ ಹೊರಬಿದ್ದ ಚೆನ್ನೈ ಸೂಪರ್ ಕಿಂಗ್ಸ್

error: Content is protected !!
Scroll to Top