ಚರ್ಮಗಂಟು ರೋಗ ➤ ಜಾನುವಾರುಗಳ ಸಾಗಾಟಕ್ಕೆ ನಿಷೇಧ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 30. ಕ್ಯಾಪ್ರಿಪಾಕ್ಸ್ ಎಂಬ ವೈರಾಣುವಿನಿಂದ ಹರಡುವ ಚರ್ಮಗಂಟು (ಲುಂಪಿ ಸ್ಕಿನ್ ಡಿಸೀಸ್) ರೋಗ ದನ ಮತ್ತು ಎಮ್ಮೆಗಳಲ್ಲಿ ಕಂಡುಬರುವ ವೈರಸ್ ಖಾಯಿಲೆಯಾಗಿದ್ದು, ರೋಗಗ್ರಸ್ಥ ಜಾನುವಾರುವಿನಿಂದ ಆರೋಗ್ಯವಂತ ಜಾನುವಾರುಗಳಿಗೆ ಹರಡುತ್ತಿದೆ.

ಜಿಲ್ಲೆಯಲ್ಲಿ 289 ಗ್ರಾಮಗಳಲ್ಲಿ ಜಾನುವಾರುಗಳಲ್ಲಿ ಚರ್ಮಗಂಟು ರೋಗ ಕಂಡು ಬಂದಿರುತ್ತದೆ. ಈವರೆಗೆ 3,414 ಜಾನುವಾರುಗಳು ರೋಗಕ್ಕೆ ತುತ್ತಾಗಿದ್ದು, 64 ಜಾನುವಾರುಗಳು ಮರಣ ಹೊಂದಿರುತ್ತದೆ. ಜಾನುವಾರುಗಳನ್ನು ಒಂದೆಡೆಯಿಂದ ಇನ್ನೊಂದೆಡೆ ಸಾಗಾಣಿಕೆ ಮಾಡುವ ಮೂಲಕ ರೋಗ ಹರಡುವ ಸಾಧ್ಯತೆ ಇರುವುದರಿಂದ ಈ ರೋಗದ ನಿಯಂತ್ರಣಕ್ಕಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚರ್ಮಗಂಟು ರೋಗ ನಿಯಂತ್ರಣಕ್ಕೆ ಜಿಲ್ಲೆಯೊಳಗೆ ಮತ್ತು ಹೊರ ಜಿಲ್ಲೆ ಅಥವಾ ನೆರೆರಾಜ್ಯದಿಂದ ಜಿಲ್ಲೆಗೆ ಜಾನುವಾರುಗಳ ಸಾಗಾಟವನ್ನು ನಿಷೇಧಿಸಿ ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಅವರು ಆದೇಶಿಸಿದ್ದಾರೆ. ಅಲ್ಲದೇ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನೊಣ, ಸೊಳ್ಳೆಗಳ ನಿಯಂತ್ರಣಕ್ಕಾಗಿ ಫಾಂಗಿಗ್ ಮಾಡುವಂತೆ ಅವರು ಸಂಬಂಧಿಸಿದವರಿಗೆ ಸೂಚಿಸಿರುತ್ತಾರೆ.

Also Read  ವಿಧಾನಪರಿಷತ್ ಚುನಾವಣೆ - ಬಿಜೆಪಿ ಅಭ್ಯರ್ಥಿ ಕಿಶೋರ್ ಕುಮಾರ್ ಭರ್ಜರಿ ಗೆಲುವು

error: Content is protected !!
Scroll to Top