ಗಣರಾಜ್ಯೋತ್ಸವ ಪ್ರಯುಕ್ತ ಶೇ.50 ರಿಯಾಯಿತಿ ದರದಲ್ಲಿ ಪುಸ್ತಕ ಲಭ್ಯ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 30. ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಎಲ್ಲಾ (ಡಾ. ಬಿ.ಆರ್. ಅಂಬೇಡ್ಕರ್ ಬರಹಗಳು ಮತ್ತು ಭಾಷಣಗಳು ಸಂಪುಟ 1 ರಿಂದ ಸಂಪುಟ 22 ಸೆಟ್ ಹೊರತು ಪಡಿಸಿ) ಪ್ರಕಟಣೆಗಳನ್ನು ಗಣರಾಜ್ಯೋತ್ಸವ ಪ್ರಯುಕ್ತ 2023ರ ಜನವರಿ 1ರಿಂದ 31ರ ವರೆಗೆ ಶೇಕಡ 50% ರಿಯಾಯಿತಿಯ ದರದಲ್ಲಿ ಮಾರಾಟ ಮಾಡಲಾಗುತ್ತದೆ. ಆನ್‍ಲೈನ್ ವೆಬ್‍ಸೈಟ್ www.kuvempubhashabharati.org ಮೂಲಕವೂ ಶೇಕಡ 50% ರಿಯಾಯಿತಿ ದರದಲ್ಲಿ ಪುಸ್ತಕಗಳನ್ನು ಖರೀದಿಸಬಹುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!
Scroll to Top