ದತ್ತಪೀಠದಲ್ಲಿನ ಗೋರಿಗಳು ನಕಲಿಗಳೇ ಹೊರತು ಅಸಲಿಗಳಲ್ಲ ► ಚಿಕ್ಕಮಗಳೂರು ಶಾಸಕ‌ ಸಿ.ಟಿ.ರವಿ ಹೇಳಿಕೆ

(ನ್ಯೂಸ್ ಕಡಬ) newskadaba.com ಚಿಕ್ಕಮಗಳೂರು, ಡಿ.04. ದತ್ತಪೀಠದಲ್ಲಿರುವುದು ಎಲ್ಲವೂ ನಕಲಿ ಗೋರಿಗಳಾಗಿದ್ದು, ಹಿಂದೆ ಅಲ್ಲಿ ಮುಸಲ್ಮಾನರು ಅಷ್ಟು ಜನ ಇರಲೇ ಇಲ್ಲ. ಹಾಗಿರುವಾಗ ಈ ಗೋರಿಗಳು ಎಲ್ಲಿಂದ ಬಂತು ಎಂದು ಪ್ರಶ್ನಿಸುವ ಮೂಲಕ ಸರ್ವಧರ್ಮದ ಭಾವೈಕ್ಯತಾ ಕೇಂದ್ರವಾಗಿರುವ ದತ್ತಾತ್ರೇಯ ಬಾಬಾ ಬುಡಾನ್ ಗಿರಿಯ ವಿವಾದಿತ ಸ್ಥಳದಲ್ಲಿ ಕೇಸರಿ ಧ್ವಜ ಹಾರಿಸಿ ಗೋರಿ ಧ್ವಂಸಕ್ಕೆ ಯತ್ನಿಸಿದ ಘಟನೆಯನ್ನು ಶಾಸಕ ಸಿ.ಟಿ.ರವಿ ಪರೋಕ್ಷವಾಗಿ ಸಮರ್ಥಿಸಿದ್ದಾರೆ.

ದತ್ತಜಯಂತಿಯು ಶೇ.90 ಭಾಗ ಶಾಂತಿಯುತವಾಗಿ ನಡೆದಿದ್ದು, ಸಣ್ಣ ತಪ್ಪಿಗೆ ಹಿಂದೂಗಳ ಮೇಲೆ ಹಲ್ಲೆ ಮಾಡುವುದು ಸರಿಯಲ್ಲ ಎಂದಿರುವ ಅವರು, ಹೀಗೆ ಪ್ರತೀಕಾರ ಮಾಡುವುದಾರೆ ಹಿಂದೂಗಳ ತಾಳ್ಮೆಗೆ ಬೆಲೆಯಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

Also Read  ಸೈಕಲ್ ಮೇಲೆ ಹರಿದ ಜೆಸಿಬಿ ➤ ಬಾಲಕ ದುರ್ಮರಣ

error: Content is protected !!
Scroll to Top