ಶತಮಾನದ ದೀಪ ದೇವರ ಪಾದ ಸೇರಿದೆ’ ➤ ತಾಯಿಯ ಅಗಲಿಕೆಯ ಬಗ್ಗೆ ಪ್ರಧಾನಿ ಮೋದಿ ಟ್ವೀಟ್

(ನ್ಯೂಸ್ ಕಡಬ) newskadaba.com ನವದೆಹಲಿ, ಡಿ.30. ಶತಮಾನದ ದೀಪವು ದೇವರ ಪಾದ ಸೇರಿದೆ ಎಂದಿ ಪ್ರಧಾನಿ ನರೇಂದ್ರ ಮೋದಿಯವರು ಟ್ವೀಟ್ ಮಾಡಿದ್ದಾರೆ.

ತನ್ನ ತಾಯಿ ಹೀರಾಬೆನ್ ಅವರು ಅಲ್ಪಕಾಲದ ಅಸೌಖ್ಯದಿಂದಾಗಿ ಅಹಮದಾಬಾದಿನ ಯುಎನ್ ಮೆಹ್ತಾ ಆಸ್ಪತ್ರೆಯಲ್ಲಿ ಶುಕ್ರವಾರ ಮುಂಜಾನೆ ಕೊನೆಯುಸಿರೆಳೆದಿದ್ದರು. ಈ ಬಗ್ಗೆ ತನ್ನ ಅಧಿಕೃತ ಖಾತೆಯಲ್ಲಿ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಭವ್ಯವಾದ ಶತಮಾನವು ದೇವರ ಪಾದದ ಮೇಲೆ ನಿಂತಿದೆ. ತಾಯಿಯಲ್ಲಿ ನಾನು ಮೂರು ವಿಚಾರಗಳನ್ನು ಕಂಡಿದ್ದು, ಅದು ತಪಸ್ವಿಯ ಪ್ರಯಾಣ, ನಿಸ್ವಾರ್ಥ ಕರ್ಮಯೋಗಿಯ ಸಂಕೇತ ಮತ್ತು ಮೌಲ್ಯಗಳಿಗೆ ಬದ್ಧವಾಗಿರುವ ಜೀವನವನ್ನು ಒಳಗೊಂಡಿದೆ ಎಂದವರು ಬರೆದುಕೊಂಡಿದ್ದಾರೆ.

Also Read  ಏರ್ ಪೋರ್ಟ್ ಗೆ ತೆರಳುತ್ತಿದ್ದ ಕಾರು ಅಪಘಾತ ➤ ನಾಲ್ವರು ಹಜ್ ಯಾತ್ರಿಕರು ದುರ್ಮರಣ

 

error: Content is protected !!
Scroll to Top