(ನ್ಯೂಸ್ ಕಡಬ) newskadaba.com ಸಿದ್ದಾಪುರ (ಕೊಡಗು), ಡಿ. 29. ಸಿದ್ದಾಪುರ ವ್ಯಾಪ್ತಿಯ ಕಾಫಿ ತೋಟಗಳಲ್ಲಿ ಬಿಡುಬಿಟ್ಟು ಕೃಷಿ ಫಸಲುಗಳನ್ನು ತಿಂದು, ತುಳಿದು ನಾಶ ಮಾಡಿ ಬೆಳೆಗಾರರು, ಕಾರ್ಮಿಕರರಲ್ಲಿ ಆತಂಕ ಸೃಷ್ಟಿಸಿದ್ದ ಕಾಡಾನೆ ಯನ್ನು ಕೊನೆಗೂ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ ಎನ್ನಲಾಗಿದೆ.
22 ವರ್ಷ ಪ್ರಾಯದ ಗಂಡಾನೆಯನ್ನು ಮತ್ತಿಗೋಡು, ದುಬಾರೆ ಶಿಬಿರದ ಐದು ಸಾಕಾನೆಗಳ ಸಹಕಾರದೊಂದಿಗೆ ಸತತ ಮೂರು ದಿನಗಳ ಕಾಲ ಅಧಿಕಾರಿಗಳು ಹಾಗೂ 50ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯಾ ಚರಣೆ ನಡೆಸಿ ಸೆರೆ ಹಿಡಿದರು ಎಂದು ತಿಳಿದು ಬಂದಿದೆ. ಕರಡಿ ಗೋಡು ಭುವನಹಳ್ಳಿ ಕಾಫಿ ತೋಟದಲ್ಲಿ ಪತ್ತೆಯಾದ ಆನೆಗೆ ಮೊದಲು ಅರವಳಿಕೆ ನೀಡಿ ನಂತರ ಸೆರೆಹಿಡಿದು ದುಬಾರೆ ಶಿಬಿರದಲ್ಲಿರುವ ಕ್ರಾಲ್‌ನಲ್ಲಿ ಬಿಡಲಾಗಿದೆ ಎಂದು ವರದಿಯಾಗಿದೆ.