ಕಾರು ಸ್ಫೋಟ ಪ್ರಕರಣ ➤ ಮತ್ತಿಬ್ಬರ ಬಂಧನ

(ನ್ಯೂಸ್ ಕಡಬ) newskadaba.com ಚೆನ್ನೈ, ಡಿ. 29. ಅ. 23ರಂದು ಕೊಯಮತ್ತೂರಿನ ಕೊಟ್ಟೈ ಸಮಿಪ ಕಾರಿನ ಒಳಗೆ ಸಿಲಿಂಡರ್ ಸ್ಫೋಟಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳವು ಮತ್ತಿಬ್ಬರು ಆರೋಪಿಗಳನ್ನು ಬಂಧಿಸಿರುವ ಘಟನೆ ನಡೆದಿದೆ.

ಬಂಧಿತ ಆರೋಪಿಗಳನ್ನು ಶೇಖ್‌ ಹಿದಾಯತುಲ್ಲಾ ಮತ್ತು ಸನೋಫ‌ರ್‌ ಅಲಿ ಎಂದು ಗುರುತಿಸಲಾಗಿದೆ. ಇದೀಗ ಇವರಿಬ್ಬರ ಸಹಿತ ಪ್ರಕರಣದಲ್ಲಿ ಇದುವರೆಗೂ ಒಟ್ಟು 11 ಮಂದಿಯನ್ನು ಬಂಧಿಸಲಾಗಿದೆ. 2022ರ ಫೆಬ್ರವರಿಯಲ್ಲಿ ತಮಿಳುನಾಡಿನ ಈರೋಡ್‌ ಜಿಲ್ಲೆಯ ಸತ್ಯಮಂಗಲಂ ಕಾಡಿನ ಅಸನೂರ್‌ ಮತ್ತು ಕದಂಬೂರ್‌ ಪ್ರದೇಶದಲ್ಲಿ ಭಯೋತ್ಪಾದನೆ ಕೃತ್ಯ ಕೈಗೊಳ್ಳುವ ನಿಟ್ಟಿನಲ್ಲಿ ಆರೋಪಿಗಳು ಪಿತೂರಿ ನಡೆಸಿದ್ದರು.

Also Read  ರಾಜ್ಯ ಸರ್ಕಾರ ಹಣಕಾಸು ನಿರ್ವಹಿಸಲಾಗದೆಯೇ ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿದೆ-ಪ್ರಲ್ಹಾದ್ ಜೋಶಿ

error: Content is protected !!
Scroll to Top