ಬಂಟ್ವಾಳ: ಸಾಲೆತ್ತೂರು ಶಾಲೆಗೆ ಸರಕಾರದಿಂದ ಶೌಚಾಲಯ ಕೊಡುಗೆ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 29. ಬಂಟ್ವಾಳ ತಾಲೂಕಿನ ಸಾಲೆತ್ತೂರಿನಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯ 2017-18ನೇ ಸಾಲಿನ ನರೇಗಾ ಹಾಗೂ ಶಿಕ್ಷಣ ಇಲಾಖೆ ಒಗ್ಗೂಡಿಸುವ ಕಾರ್ಯಕ್ರದಡಿ ಎರಡು ಶೌಚಾಲಯಗಳನ್ನು ಕಲ್ಪಿಸಿಕೊಡಲಾಗಿದೆ. ಅದೇ ಶೈಕ್ಷಣಿಕ ವರ್ಷದಲ್ಲಿ ಮಳೆ ಹಾನಿ ಕಾರ್ಯಕ್ರಮದಡಿ ಶಾಲಾ ಕೊಠಡಿಗಳ ದುರಸ್ಥಿ ಕಾಮಗಾರಿ 15 ಲಕ್ಷ ರೂ.ಗಳ ವೆಚ್ಚದಲ್ಲಿ, ಪೂರ್ಣವಾಗಿದೆ. 2022-23ನೇ ಸಾಲಿಗೆ ರಾಜ್ಯ ವಲಯ ವಿವೇಕಾ ಕಾರ್ಯಕ್ರಮದಡಿ 3 ಕೊಠಡಿಗಳು ಸರ್ಕಾರದಿಂದ ಮಂಜೂರಾಗಿದೆ ಎಂದು ಬಂಟ್ವಾಳ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Also Read  ಸುಬ್ರಹ್ಮಣ್ಯ: ಪಾರ್ಕಿಂಗ್‌ ಮಾಡಿದ್ದ ಓಮ್ನಿ ಕಳವು -ಪ್ರಕರಣ ದಾಖಲು

error: Content is protected !!
Scroll to Top