ಇಂದಿನಿಂದ (ಡಿ.29) ಸುಪ್ರೀಂ ಕೋರ್ಟ್ ನ್ಯಾಯಾಧೀಶರ ದ.ಕ ಜಿಲ್ಲಾ ಪ್ರವಾಸ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 29. ಸುಪ್ರೀಂ ಕೋರ್ಟ್‍ನ ನ್ಯಾಯಾಧೀಶರಾದ ಎಸ್. ಅಬ್ದುಲ್ ನಜೀರ್ ಅವರು ಡಿ.29ರಿಂದ 31ರವರೆಗೆ ದ.ಕ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದಾರೆ. ಡಿ.29ರ ಗುರುವಾರ ಸಂಜೆ 5.25ಕ್ಕೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ನಂತರ ಮೂಡಬಿದಿರೆಯ ಬೆಳುವಾಯಿ ಗ್ರಾಮಕ್ಕೆ ತೆರಳಿ ವಾಸ್ತವ್ಯ ಹೂಡಲಿದ್ದಾರೆ.

ಡಿ.30ರ ಶುಕ್ರವಾರ ಬೆಳಿಗ್ಗೆ 9.20ಕ್ಕೆ ಮೂಡಬಿದ್ರೆಯಿಂದ ಉಡುಪಿಗೆ ತೆರಳುವರು. ಸಂಜೆ 4.30ಕ್ಕೆ ಮೂಡಬಿದಿರೆಗೆ ಆಗಮಿಸಿ, ನೂತನವಾಗಿ ನಿರ್ಮಿಸಲಾದ ಬಾರ್ ಅಸೋಸಿಯೇಷನ್ ಕಟ್ಟಡವನ್ನು ಉದ್ಘಾಟಿಸುವರು. ರಾತ್ರಿ 7 ಗಂಟೆಗೆ ಅಲ್ಲಿಂದ ಹೊರಡುವರು. ಡಿ.31ರ ಶನಿವಾರ ಸಂಜೆ 6.05ಕ್ಕೆ ಮಂಗಳೂರಿನಿಂದ ವಿಮಾನದ ಮೂಲಕ ಬೆಂಗಳೂರು ತಲುಪುವರು ಎಂದು ಪ್ರಕಟಣೆ ತಿಳಿಸಿದೆ.

Also Read  ಟಿಪ್ಪು ಸುಲ್ತಾನ್, ಸಿದ್ದರಾಮಯ್ಯರವರ ಅವಹೇಳನ ► ಉಪ್ಪಿನಂಗಡಿ ಯುವ ಕಾಂಗ್ರೆಸ್ ನಿಂದ ದೂರು

error: Content is protected !!
Scroll to Top