➤ ಜಯಮಂಗಲಿ ನದಿಯಲ್ಲಿ ಈಜಲು ಹೋದ ಸಹೋದರಿಯರು ನೀರು ಪಾಲು!

(ನ್ಯೂಸ್ ಕಡಬ) newskadaba.com.ಮಧುಗಿರಿ, ಡಿ.28. ಜಯಮಂಗಲಿ ನದಿಯಲ್ಲಿ ಈಜಲು ಹೋದ ಸಹೋದರಿಯರು ನೀರು ಪಾಲಾಗಿರುವ ಘಟನೆ ಮಧುಗಿರಿ ತಾಲೂಕಿನ ವೀರಾಪುರದಲ್ಲಿ ನಡೆದಿದೆ.

ಚೆಕ್ ಡ್ಯಾಂನ  ನೀರಿನ ಆಳ ಅರಿಯದೆ ಈಜಲು ಹೋದ ಐವರು ಬಾಲಕಿಯರ ಪೈಕಿ ಮೂವರನ್ನು ಹತ್ತಿರದಲ್ಲಿ ಬಟ್ಟೆ ಒಗೆಯುತ್ತಿದ್ದ ಮಹಿಳೆಯರು ರಕ್ಷಿಸಿದ್ದು, ಉಳಿದ ಇಬ್ಬರು ಈಜುಲು ಬರದೆ ನದಿಯಲ್ಲಿ ಮುಳುಗಿದ್ದಾರೆ. ಈ ದುರ್ಘಟನೆಯಲ್ಲಿ ಮೃತಪಟ್ಟವರು ಪ್ರಿಯಾಂಕ (8)  ಹಾಗೂ ಬಿಂದು(9) ಎಂದು ಗುರುತಿಸಲಾಗಿದ್ದು, ಇವರಿಬ್ಬರು ಸಹೋದರಿಯರಾಗಿದ್ದಾರೆ. ಮೃತ ಮಕ್ಕಳು ಕೆಂಪಾಪುರ ಗ್ರಾಮದ ಬಾಬುರವರ ಮಕ್ಕಳಾಗಿದ್ದು, ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.

Also Read  ಮಲ್ಲೇಶ್ವರಂ ನಿವಾಸದಲ್ಲಿ ಸ್ಪಂದನಾ ರಾಘವೇಂದ್ರ ಅಂತಿಮ ದರ್ಶನ

error: Content is protected !!
Scroll to Top