ಉಪ್ಪಿನಂಗಡಿ ಗೃಹ ರಕ್ಷಕ ಹುದ್ದೆ ➤ಅರ್ಹರಿಂದ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com. ಉಪ್ಪಿನಂಗಡಿ,ಡಿ.28.  ಗೃಹ ರಕ್ಷಕರ ಘಟಕದಲ್ಲಿ ಖಾಲಿ ಇರುವ ಪುರುಷರ ಸ್ವಯ ಸೇವಾ ಗೃಹರಕ್ಷಕರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.

ಉಪ್ಪಿನಂಗಡಿ ಸಮೀಪದ  ಆಸುಪಾಸಿನ ಹುಡುಗರು ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿದಾರರು 19 ವರ್ಷ ಮೇಲ್ಪಟ್ಟವರಾಗಿರಬೇಕಾಗಿದ್ದು, ಎಸೆಸ್ಸೆಲ್ಸಿ ಪಾಸಾಗಿರಬೇಕು. 168 ಸೆಂ.ಮೀ. ಎತ್ತರ ಹಾಗೂ ಕನಿಷ್ಠ 50 ಕೆ.ಜಿ ತೂಕವನ್ನು ಹೊಂದಿರಬೇಕು.

ಯಾವುದೇ ಅಂಗ ವೈಪಲ್ಯ ಇರಬಾರದು. ಸ್ವಯಂ ಆಸಕ್ತಿ ಇರುವವರಿಗೆ ಆದ್ಯತೆ ಇದ್ದು, ಉದ್ಯೋಗದಲ್ಲಿರುವವರಿಗೆ ಬಿಡುವಿನ ವೇಳೆಯಲ್ಲಿ ಕೆಲಸ ಮಾಡಲು ಅವಕಾಶವಿದೆ. ಸರಕಾರ ನಿಗದಿ ಪಡಿಸಿದ ಅರ್ಜಿಯನ್ನು 1/1/2023 ರಂದು ಬೆಳಗ್ಗೆ 9ರಿಂದ ಸಂಜೆ 4ರವರೆಗೆ ಉಪ್ಪಿನಂಗಡಿ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಸಮೀಪವಿರುವ ಅಂಗನವಾಡಿ ಬಳಿಯ ಘಟಕದ ಕಚೇರಿಯಿಂದ ಪಡೆದುಕೊಂಡು, ಭರ್ತಿ ಮಾಡಿ ಅಲ್ಲಿಗೆ ನೀಡಬೇಕು. ಹೆಚ್ಚಿನ ಮಾಹಿತಿಗೆ 8095642480 ನ್ನು ಸಂಪರ್ಕಿಸ ಬಹುದು.

Also Read  ನಾಳೆ(ಸೆ.30ರಂದು) ನೂಜಿಬಾಳ್ತಿಲದಲ್ಲಿ ಪುತ್ತೂರು ಧರ್ಮಪ್ರಾಂತ್ಯದ ನೂತನ ಧರ್ಮಾಧ್ಯಕ್ಷರ ಪೀಠಾರೋಹಣ ► ಅಭಿನಂದನಾ ಸಮಾರಂಭ

error: Content is protected !!
Scroll to Top