ಬಾವಿಗೆ ಇಳಿದ ಮಾನಸಿಕ ಅಸ್ವಸ್ಥೆ ಮಹಿಳೆ ➤ ಅಗ್ನಿಶಾಮಕ ದಳದಿಂದ ರಕ್ಷಣೆ

(ನ್ಯೂಸ್ ಕಡಬ) newskadaba.com ಪುತ್ತೂರು, ಡಿ. 28. ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಕೆಯ್ಯೂರು ಗ್ರಾಮದ ಮಾಡಾವು ಕಟ್ಟೆ ಬಳಿಯ ನಿವಾಸಿ ಡೇನಿಯಲ್ ಡಿಸೋಜ ಎಂಬವರ ಪತ್ನಿ ವಿನುತ ವೆಗಸ್ ಎಂಬವರು ತಮ್ಮ ಮನೆಯ ಎದುರುಗಡೆ ಇರುವ ಬಾವಿಗೆ ಇಳಿದ ಪ್ರಸಂಗ ನಡೆದಿದೆ.

 

ವಿಷಯ ತಿಳಿದ ಮಹಿಳೆಯ ಮನೆಯವರು ಪುತ್ತೂರು ಅಗ್ನಿಶಾಮಕ ದಳದವರಿಗೆ ನೀಡಿದ ಮಾಹಿತಿಯಂತೆ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದವರು ಮಹಿಳೆಯನ್ನು ಬಾವಿಯಿಂದ ಮೇಲೆಕ್ಕೆತ್ತಿ, ಹೆಚ್ಚಿನ ಚಿಕಿತ್ಸೆಗೆ ಮಹಿಳೆಯನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಪುತ್ತೂರು ಅಗ್ನಿಶಾಮಕ ಠಾಣಾಧಿಕಾರಿ ವಿ.ಸುಂದರ, ಪ್ರಮುಖ ಅಗ್ನಶಾಮಕ ಕೆ.ಪ್ರವೀಣ್ ಕುಮಾರ್, ಚಾಲಕ ಮೈಲಾರಪ್ಪ, ಅಗ್ನಿಶಾಮಕ ಅಬ್ದುಲ್ ಅಝೀಝ್, ಗೃಹರಕ್ಷಕರಾದ ಆಕಾಶ್, ಮಣಿಗಂಡನ್ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

Also Read  ಕೈಕಂಬ: ಅನನ್ಯ ಚೇತನ ಫೌಂಡೇಶನ್(ರಿ) ವತಿಯಿಂದ ಬ್ಯಾರಿಕೇಡ್ ಹಸ್ತಾಂತರ

error: Content is protected !!
Scroll to Top