ರೇಬಿಸ್ ವ್ಯಾಕ್ಸಿನೇಷನ್ ಶಿಬಿರದಲ್ಲೇ ಹುಚ್ಚು ನಾಯಿ ಹುಚ್ಚಾಟ!

(ನ್ಯೂಸ್ ಕಡಬ) newskadaba.com ತಮಿಳುನಾಡು, ಡಿ. 28. ರೇಬಿಸ್​ ಶಿಬಿರದ ವೇಳೆ ಹುಚ್ಚು ನಾಯಿಯೊಂದು ಜನರ ಮೇಲೆ ಹಾಗೂ ಇತರ ನಾಯಿಗಳ ಮೇಲೆ ದಾಳಿ ನಡೆಸಿದ ಘಟನೆ ತಮಿಳುನಾಡಿನ ಕೃಷ್ಣಗಿರಿಯ ಪಿಆರ್​ಸಿ ಶಾಲಾ ಆವರಣದಲ್ಲಿ ನಡೆದಿದೆ.

 

ರೇಬಿಸ್ ಶಿಬಿರಕ್ಕೆ ಸಾಕಷ್ಟು ಸಾಕು ನಾಯಿಗಳನ್ನು ಕರೆತರಲಾಗಿತ್ತು. ಈ ವೇಳೆ ಲಸಿಕೆ ಹಾಕಲು ತಂದಿದ್ದ ನಾಯಿಯೊಂದು ಹುಚ್ಚೆದ್ದು ರಂಪಾಟ ಮಾಡಿ, ಸ್ಥಳದಲ್ಲಿದ್ದ ಇತರೆ ನಾಯಿಗಳಿಗೆ ಕಚ್ಚಿದೆ. ಅಲ್ಲದೇ ಹುಚ್ಚು ಹಿಡಿದಂತೆ ದಾಂಧಲೆ ನಡೆಸಿದ ನಾಯಿಯನ್ನು ಬಿಡಿಸಲು ಮುಂದಾದ ಜನರ ಮೇಲೂ ನಾಯಿ ದಾಳಿ ನಡೆಸಿದೆ ಎಂದೆನ್ನಲಾಗಿದೆ.

Also Read  ➤ವರದಕ್ಷಿಣೆ ಕೊಟ್ಟಿಲ್ಲ ಎಂದು ಮದುವೆ ನಿರಾಕರಿಸಿದ ಯುವಕ

error: Content is protected !!
Scroll to Top