ಇಂದು ರಾತ್ರಿ ಕಡಬ ಟೌನ್‌ ಜುಮಾ ಮಸೀದಿಯಲ್ಲಿ ► ‘ಡ್ರೀಂ ಯೂತ್’ ಮಾದಕ‌ ವಸ್ತುಗಳ ಜಾಗೃತಿ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಕಡಬ, ಡಿ.03. ದೇಶದ ಯುವ ಜನತೆಗೆ‌ ಮಾರಕವಾಗಿರುವ ಗಾಂಜಾ, ಅಫೀಮುಗಳ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ‘ಡ್ರೀಂ ಯೂತ್’ ಎಂಬ ವಿಷಯದಲ್ಲಿ ಕಡಬದಲ್ಲಿ ಇಂದು ರಾತ್ರಿ 7.30 ಗಂಟೆಗೆ ವಿಚಾರ ಸಂಕಿರಣ ನಡೆಯಲಿದೆ.

ಕಡಬ ರಹ್ಮಾನಿಯಾ ಜುಮಾ‌‌ ಮಸೀದಿಯ ವಠಾರದಲ್ಲಿ ಕಡಬದ ಮುಈನುಲ್ ಇಸ್ಲಾಂ ಮದ್ರಸದ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ನಡೆಯಲಿರುವ ಈ ವಿಚಾರಗೋಷ್ಠಿಯನ್ನು ಮಂಗಳೂರಿನ ಕೇಂದ್ರ ಮಸೀದಿಯ ಖತೀಬರಾದ ಸ್ವದಕತುಲ್ಲಾ ಫೈಝಿ ಮಂಡಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

error: Content is protected !!
Scroll to Top