ಉಳ್ಳಾಲ: ಮುಂದುವರಿದ ಕಡಲ‌ಬ್ಬರ ► ರೆಸಾರ್ಟ್ ತಡೆಗೋಡೆ ಕುಸಿತ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.03. ಓಖಿ ಚಂಡಮಾರುತದ ಪರಿಣಾಮದಿಂದಾಗಿ ಸೋಮೇಶ್ವರ, ಉಳ್ಳಾಲ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿಯಿಂದ ಎದ್ದಿರುವ ಸಮುದ್ರದ ಅಲೆಗಳ ಅಬ್ಬರವು ಭಾನುವಾರ ಬೆಳಗ್ಗೆಯೂ ಮುಂದುವರಿದಿದೆ.

ಶನಿವಾರ ರಾತ್ರಿಯಿಂದ ಸಮುದ್ರದ ಬೃಹತ್ ಅಲೆಗಳು ಸೋಮೇಶ್ವರ, ಉಚ್ಚಿಲ ಪರಿಸರದ ಕೆಲವು ಮನೆಗಳಿಗೆ ಅಪ್ಪಳಿಸಿ ಸಮುದ್ರ ತೀರದ ನಿವಾಸಿಗಳನ್ನು ಆತಂಕಗೊಳಿಸಿತ್ತು. ಉಳ್ಳಾಲದ ರೆಸಾರ್ಟ್ ಒಂದರ ತಡೆಗೋಡೆಯು ಸಮುದ್ರದ ಅಲೆಗಳಿಗೆ ಸಿಲುಕಿ ಕುಸಿದಿತ್ತು. ಶನಿವಾರ ತಡರಾತ್ರಿಯಿಂದ ಸಮುದ್ರವು ಶಾಂತವಾಗತೊಡಗಿದ್ದು ಅಲೆಗಳ ಅಬ್ಬರ ಮಾತ್ರ ಮುಂದುವರಿದಿದೆ.

Also Read  ವಿಟ್ಲ: ಉದ್ಯಮಿಯ ಮನೆಗೆ ನುಗ್ಗಿ ಮಹಿಳೆಯ ಮೇಲೆ ಹಲ್ಲೆಗೆ ಯತ್ನ ➤ ಸಾರ್ವಜನಿಕರಿಂದ ಗೂಸಾ

ಮುಂಜಾಗ್ರತ ಕ್ರಮವಾಗಿ ಪರಿಸರದ ವಿವಿಧೆಡೆ ಪೊಲೀಸರನ್ನು ನಿಯೋಜಿಸಲಾಗಿದೆ‌. ತುರ್ತು ಸೇವೆಗಳಿಗಾಗಿ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳದಲ್ಲೇ ಠಿಕಾಣಿ ಹೂಡಿದ್ದಾರೆ.

 

error: Content is protected !!
Scroll to Top