ಮಂಗಳೂರು: ಅಪ್ರಾಪ್ತೆಗೆ ಲೈಂಗಿಕ ದೌರ್ಜನ್ಯವೆಸಗಿದ ಮಾವ ➤ 15 ವರ್ಷ ಜೈಲು ಶಿಕ್ಷೆ ಪ್ರಕಟ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 28. ಅಪ್ರಾಪ್ತ ವಯಸ್ಸಿನ ಸೊಸೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗೆ ಜಿಲ್ಲಾ ಮತ್ತು ಸೆಷನ್ಸ್ ಎಫ್.ಟಿ.ಎಸ್.ಸಿ-|| ನ್ಯಾಯಾಲಯವು 15 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ ಐವತ್ತು ಸಾವಿರ ರೂ. ದಂಡ ವಿಧಿಸಿದೆ.

ಸಂತ್ರಸ್ತ ವಿದ್ಯಾರ್ಥಿನಿಯು 2019ರ ಆ.09 ರಂದು ಶಾಲೆಯಿಂದ ಮರಳಿ ಸ್ನೇಹಿತರ ಜೊತೆಗೆ ಮನೆಗೆ ಹೋಗುತ್ತಿದ್ದ ವೇಳೆ ಆಕೆಯನ್ನು ಹಿಂಬಾಲಿಸಿದ ಮಾವ, ಸ್ನೇಹಿತೆಯನ್ನು ನಿಂದಿಸಿ ಕಳುಹಿಸಿದ್ದ. ನಂತರ ಸಂತ್ರಸ್ತೆಯನ್ನು ಬಲವಂತವಾಗಿ ಗುಡ್ಡಗಾಡು ಪ್ರದೇಶಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯವೆಸಗಿ, ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದ. ಈ ಕುರಿತು ಸಂತ್ರಸ್ತ ಬಾಲಕಿಯ ಸ್ನೇಹಿತೆ, ಬಾಲಕಿಯ ಮನೆಯವರಿಗೆ ತಿಳಿಸಿದ್ದು, ವಿಷಯವನ್ನರಿತ ತಾಯಿಯು ದೂರು ದಾಖಲಿಸಿದ್ದರು.

Also Read  ಬೆಳ್ತಂಗಡಿ: ರಸ್ತೆ ಬದಿಯ ಬರೆಗೆ ಖಾಸಗಿ ಬಸ್ ಢಿಕ್ಕಿ !!! ➤ ಮಹಿಳೆ ಮೃತ್ಯು, ಐವರು ಪ್ರಯಾಣಿಕರಿಗೆ ಗಾಯ

error: Content is protected !!
Scroll to Top