ಶ್ರೀಲಂಕಾ ವಿರುದ್ದ ಟಿ-20 ಸರಣಿಗೆ ನಾಯಕನಾಗಿ ಹಾರ್ದಿಕ್ ಪಾಂಡ್ಯ.!

(ನ್ಯೂಸ್ ಕಡಬ) newskadaba.com ಹೊಸದಿಲ್ಲಿ, ಡಿ. 28. 2023ರ ಜನವರಿ 3ರಿಂದ ಆರಂಭವಾಗಲಿರುವ ಶ್ರೀಲಂಕಾ ವಿರುದ್ಧದ ಟಿ-20 ಮತ್ತು ಏಕದಿನ ಕ್ರಿಕೆಟ್ ಪಂದ್ಯಾಟಕ್ಕೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಮಂಗಳವಾರ ತಂಡವನ್ನು ಪ್ರಕಟಿಸಿದ್ದು, ಏಕದಿನ ಪಂದ್ಯಗಳಿಗೆ ಹಾರ್ದಿಕ್ ಪಾಂಡ್ಯ ನಾಯಕತ್ವ ವಹಿಸಿಕೊಳ್ಳಲಿದ್ದಾರೆ.

ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರನ್ನು ಟಿ-20 ಸರಣಿಗೆ ನಾಯಕರಾಗಿ ಆಯ್ಕೆ ಮಾಡಲಾಗಿದ್ದು, ಸೂರ್ಯಕುಮಾರ್ ಯಾದವ್ ಉಪನಾಯಕರಾಗಿರುತ್ತಾರೆ. ಕೆ.ಎಲ್.ರಾಹುಲ್ ಹಾಗೂ ವಿರಾಟ್ ಕೊಹ್ಲಿ ಅವರನ್ನು ಟಿ-20 ಸರಣಿಯಿಂದ ಹೊರಗಿಡಲಾಗಿದ್ದು, ಏಕದಿನ ಪಂದ್ಯಕ್ಕೆ ಇವರು ಮರಳಲಿದ್ದಾರೆ. ಹೆಬ್ಬೆರಳಿನ ಗಾಯದಿಂದಾಗಿ ರೋಹಿತ್ ಶರ್ಮಾ ಮೂರು ಪಂದ್ಯಗಳ ಟಿ-20 ಸರಣಿಯಿಂದ ಹೊರಗುಳಿದಿದ್ದಾರೆ.

Also Read  ​ಕೊಟ್ಟ ಮಾತು ಉಳಿಸಿಕೊಂಡ ಕೆಎಲ್ ರಾಹುಲ್

error: Content is protected !!
Scroll to Top