‘ಓಖೀ’ ಚಂಡಮಾರುತಕ್ಕೆ ಮಂಗಳೂರು ತತ್ತರ ► ಉಳ್ಳಾಲ ಪರಿಸರದಲ್ಲಿ ಮನೆಗೆ ನುಗ್ಗಿದ ಸಮುದ್ರದ ನೀರು

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.02. ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ ಸೃಷ್ಟಿಯಾಗಿರುವ ‘ಓಖೀ’ ಚಂಡಮಾರುತದ ಎಫೆಕ್ಟ್ ಕರಾವಳಿ ಭಾಗದಲ್ಲಿ ಕಾಣತೊಡಗಿದ್ದು, ಸಮುದ್ರದ ಭೋರ್ಗರೆತ ಹೆಚ್ಚಾಗುತ್ತಿದೆ.

ಉಳ್ಳಾಲ – ಸೋಮೇಶ್ವರದಲ್ಲಿ ರಸ್ತೆಗೆ ಅಪ್ಪಳಿಸಿದ ಸಮುದ್ರದ ಅಲೆಗಳಿಂದಾಗಿ ರೆಸಾರ್ಟ್ ನ ತಡೆಗೋಡೆ ಕುಸಿದಿದ್ದು, ಅಲೆಯ ಅಬ್ಬರಕ್ಕೆ ರೆಸಾರ್ಟ್ ನಲ್ಲಿದ್ದ ಜನ ದಿಕ್ಕುಪಾಲಾಗಿ ಓಡಿದ ಘಟನೆ ಶನಿವಾರ ರಾತ್ರಿ ನಡೆದಿದೆ. ಪರಿಸರದಲ್ಲಿ ಪೊಲೀಸರು ಮುನ್ನೆಚ್ಚರಿಕೆ ಘೋಷಿಸಿದ್ದಾರೆ.

ಉಚ್ಚಿಲದಲ್ಲಿ ಮನೆಗೆ‌ ಸಮುದ್ರದ ನೀರು ಬಂದಿದೆ. ಇನ್ನುಳಿದಂತೆ ಪಣಂಬೂರು, ಪಡುಬಿದ್ರಿ, ಕಾಪು, ಹೆಜಮಾಡಿ ಕಡಲ ತೀರದಲ್ಲಿ ಭಾರಿ ಗಾತ್ರದ ಅಲೆಗಳು ದಡಕ್ಕೆ ಅಪ್ಪಳಿಸುತ್ತಿದ್ದು, ಮೀನುಗಾರರು ದೋಣಿಗಳನ್ನು ದಡಕ್ಕೆ ತರುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಉಚ್ಚಿಲದ ಪೆರಿಬೈಲ್ ನಲ್ಲಿ ಸಮುದ್ರದ ನೀರು ಮನೆಗೆ ನುಗ್ಗಿದ್ದು, ಒಳ ರಸ್ತೆಗಳಲ್ಲಿ ನೀರು ಹರಿದಿದೆ. ಸಮುದ್ರ ತೀರದಲ್ಲಿನ ಜನತೆ ಸಂಕಷ್ಟವನ್ನು ಎದುರಿಸುತ್ತಿದ್ದಾರೆ.

Also Read  ಕರ್ನಾಟಕ ಚಲನಚಿತ್ರ ಅಕಾಡೆಮಿ ➤ ‘ಬೆಳ್ಳಿ ಹೆಜ್ಜೆ’ಯಲ್ಲಿ ನಮ್ಮೊಂದಿಗೆ - ಡಾ. ರಿಚರ್ಡ್ ಕ್ಯಾಸ್ಟಲಿನೋ

error: Content is protected !!
Scroll to Top