ತಾಯಿಯ ಕೊನೆಯ ಆಸೆ ಪೂರೈಸಿದ ಮಗಳು ➤ ಐಸಿಯುನಲ್ಲಿಯೇ ಮಗಳ ಮದುವೆ

ನ್ಯೂಸ್ ಕಡಬ) newskadaba.com ಬಿಹಾರ, ಡಿ. 27 ಗುರಾರು ಬ್ಲಾಕ್​ನ ಬಾಲಿ ಗ್ರಾಮದ ನಿವಾಸಿ ಪೂನಂ ಕುಮಾರಿ ವರ್ಮಾ ಎಂಬುವವರ ಆರೋಗ್ಯ ತೀರಾ ಬಿಗಡಾಯಿಸಿದ್ದರಿಂದ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಗಯಾದ ಖಾಸಗಿ ಆಸ್ಪತ್ರೆಯ ವೈದ್ಯರು ಇವರ ಆರೋಗ್ಯ ಚಿಂತಾಜನಕವಾಗಿದೆ ಯಾವ ಸಂದರ್ಭದಲ್ಲಿಯೂ ಏನೂ ಆಗಬಹುದು ಎಂದು ಮೊದಲೇ ಹೇಳಿದ್ದರು. ಹಾಗಾಗಿ ಪೂನಂ ತನ್ನ ಮಗಳು ಚಾಂದನಿ (26)ಯ ಮದುವೆ ನೋಡುವುದು ತನ್ನ ಕೊನೆಯ ಆಸೆಯಾಗಿದ್ದು ಅದನ್ನು ನೆರವೇರಿಸಿ ಕೊಡಬೇಕೆಂದು ಕುಟುಂಬಸ್ಥರಲ್ಲಿ ವಿನಂತಿಸಿಕೊಂಡಳು.

ಆ ಪ್ರಕಾರ ಗುರುವಾ ಪೊಲೀಸ್​ ಠಾಣೆಯ ವ್ಯಾಪ್ತಿಯ ಸೇಲಂಪುರದ ನಿವಾಸಿ ಸುಮಿತ್ ಗೌರವ್ (28) ಅವರೊಂದಿಗೆ ಚಾಂದನಿಯ ಮದುವೆ ನೆರವೇರಿತು. ಆದರೆ ಮದುವೆಯಾದ ಎರಡು ಗಂಟೆಗಳ ನಂತರ ವಧುವಿನ ತಾಯಿ ಪೂನಂ ನಿಧನರಾದರು. ಇಂಥ ಸಂಕಟಮಯ ಸಂದರ್ಭಕ್ಕೆ ಅಲ್ಲಿದ್ದವರೆಲ್ಲ ಸಾಕ್ಷಿಯಾದರು.

Also Read  ಹೆಜ್ಜೇನು ದಾಳಿಗೆ ಇಬ್ಬರ ಸ್ಥಿತಿ ಗಂಭೀರ

error: Content is protected !!
Scroll to Top