ವಿಜಯಾ ಗ್ರಾಮೀಣ ಅಭಿವೃದ್ದಿ ಪ್ರತಿಷ್ಠಾನದ ವತಿಯಿಂದ ► ಆಲಂಕಾರು ಶ್ರೀ ದುರ್ಗಾಂಬ ಪದವಿ ಪೂರ್ವ ಕಾಲೇಜಿಗೆ ಪುಸ್ತಕ ಹಸ್ತಾಂತರ

(ನ್ಯೂಸ್ ಕಡಬ) newskadaba.com ಕಡಬ, ಡಿ.02. ಕನ್ನಡಿಗರಿಗೆ ಮೂಲ ಶಿಕ್ಷಣ ಕನ್ನಡದಲ್ಲೇ ಸಿಗುವಂತಾಗಬೇಕು ಎಂದು ಮಂಗಳೂರು ವಿಜಯಾ ಗ್ರಾಮೀಣ ಅಭಿವೃದ್ದಿ ಪ್ರತಿಷ್ಠಾನದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಉದಯ ಹೆಗ್ಡೆ ಹೇಳಿದರು.


ವಿಜಯಾ ಬ್ಯಾಂಕ್ ಆಶ್ರಯದಲ್ಲಿ ಆಲಂಕಾರು ಶ್ರೀ ದುರ್ಗಾಂಬ ಪದವಿ ಪುರ್ವ ಕಾಲೇಜಿನ ಗ್ರಂಥಾಲಯಕ್ಕೆ ಬುಧವಾರ ಸಾಯಂಕಾಲ ಪುಸ್ತಕಗಳನ್ನು ಹಸ್ತಾಂತರಿಸಿ ಅವರು ಮಾತನಾಡುತ್ತಿದ್ದರು. ಕನ್ನಡ ಮಾಧ್ಯಮದ ಹಿನ್ನೆಲೆ ತಿಳಿಯದ ಪೋಷಕರು ಆಂಗ್ಲ ಮಾಧ್ಯಮಕ್ಕೆ ಮಾರು ಹೋಗಿದ್ದಾರೆ. ಇದರಿಂದಾಗಿ ಕನ್ನಡ ಮಾಧ್ಯಮ ಶಾಲೆಗಳು ಅಪಾಯದ ಅಂಚಿನಲ್ಲಿದೆ. ಜ್ಞಾನ ಎಂಬ ಸಂಪತ್ತಿಗಿಂತ ಮಿಗಿಲಾದ ಸಂಪತ್ತಿಲ್ಲ. ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗಿದ್ದ ಸಾಮಾನ್ಯ ಜ್ಞಾನವು ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳಿಗಿಲ್ಲ. ಸ್ಫರ್ಧಾತ್ಮಕ ಯುಗದಲ್ಲಿ ಪುಸ್ತಕಗಳು ಜನತೆಯ ಸಾಮಾನ್ಯ ಜ್ಞಾನವನ್ನು ಹೆಚ್ಚಿಸುತ್ತದೆ. ಪುಸ್ತಕ ಓದುವ ಹವ್ಯಾಶ ಹೆಚ್ಚಿಸಿದಷ್ಟು ಮಸ್ತಕದ ಬೆಳವಣಿಗೆ ಹೆಚ್ಚಸುತ್ತದೆ ಎಂದರು.

ಕಡಬ ವಿಜಯಾ ಬ್ಯಾಂಕ್ನ ಕಾರ್ಯದರ್ಶಿ ರಾಜೇಂದ್ರ ರೈ ಮಾತನಾಡಿ, ಜ್ಞಾನಾರ್ಜನೆಗೆ ಕನ್ನಡ ಮಾಧ್ಯಮ ತೊಡಕಾಗದು. ಪುಸ್ತಕ ಎಂಬುವುದು ಭಗವಂತ ಜನತೆ ನೀಡಿದ ಅನರ್ಘ್ಯ ರತ್ನವಾಗಿದೆ. ಗ್ರಾಮೀಣ ಪ್ರತಿಷ್ಠಾನವು ಗ್ರಾಮೀಣ ಅಭಿವೃದ್ದಿ ಎಂದಿಗೂ ಸಹಕಾರ ನೀಡುತ್ತದೆ ಎಂದರು. ಕಡಬ ಸ್ವರಸ್ವತಿ ವಿದ್ಯಾ ಕೇಂದ್ರದ ಆಡಳಿತ ಮಂಡಳಿ ಸದಸ್ಯ ಶಿವಪ್ರಸಾದ್ ಮೈಲೇರಿ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲ ನವೀನ್ ರೈಯವರ ಅಧ್ಯಕ್ಷತೆವಹಿದ್ದರು. ಇದೇ ವೇಳೆ ಹತ್ತು ಸಾವಿರಕ್ಕೂ ಅಧಿಕ ಮೊತ್ತದ ಪುಸ್ತಕಗಳನ್ನು ಕಾಲೇಜಿನ ಗ್ರಂಥಾಲಯಕ್ಕೆ ಹಸ್ತಾಂತರಿಸಲಾಯಿತು. ಪ್ರೌಢ ಶಾಲಾ ಮುಖ್ಯಗುರು ಸತ್ಯನಾರಾಯಣ.ಎಸ್.ಎನ್. ಭಟ್ ಸ್ವಾಗತಿಸಿದರು. ಸಹ ಶಿಕ್ಷಕ ಗಂಗಪ್ಪ ಗೌಡ ವಂದಿಸಿದರು. ಉಪನ್ಯಾಸಕಿ ನಿವ್ಯಾ ರೈ ಕಾರ್ಯಕ್ರಮ ನಿರೂಪಿಸಿದರು.

error: Content is protected !!

Join the Group

Join WhatsApp Group