(ನ್ಯೂಸ್ ಕಡಬ) newskadaba.com ಕೊಯ್ನಾಡು, ಡಿ. 27. ಕೊಯ್ನಾಡು ಸಮೀಪದ ಮಾಣಿ – ಮೈಸೂರು ಹೆದ್ದಾರಿ ಬಳಿ ಪಯಸ್ವಿನಿ ನದಿಯ ತೀರಕ್ಕೆ ಸ್ನಾನಕ್ಕೆಂದು ಕೆಲವು ಯುವಕರು ಬಂದಿದ್ದ, ಸಂಧರ್ಭ ಉನೈಸ್ ಪೆರಾಜೆ ಎಂಬವರು ನದಿಯ ತಟದಲ್ಲಿ ಯಾತ್ರಿಕರು ಬಂದು ಬಿಸಾಕಿದ್ದ ಕಸದ ವಿಡಿಯೋವನ್ನು ಚಿತ್ರೀಕರಿಸುತ್ತಿದ್ದರು ಎನ್ನಲಾಗಿದೆ.
ಈ ವೇಳೆ ಕಾಡಿನಿಂದ ಏಕಾಏಕಿ ಆನೆಗಳ ಹಿಂಡೊಂದು ಇವರ ಬಳಿ ಬರುತ್ತಿದ್ದುದನ್ನು ಗಮನಿಸಿದರು, ಕೂಡಲೇ ಅವರು ಅಲ್ಲಿಂದ ಓಟಕಿತ್ತರು ಎಂದು ತಿಳಿದುಬಂದಿದೆ. ನಂತರ ದೂರದಲ್ಲಿ ನಿಂತು ಆನೆಗಳ ಹಿಂಡಿನ ವಿಡಿಯೋವನ್ನು ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ ಎಂದು ತಿಳಿದುಬಂದಿದೆ.