ಪುತ್ತೂರು: ಬೈಕ್ – ಬೈಕ್ ಢಿಕ್ಕಿ ► ಓರ್ವ ಮೃತ್ಯು, ಮೂವರು ಗಂಭೀರ

(ನ್ಯೂಸ್ ಕಡಬ) newskadaba.com ಪುತ್ತೂರು, ಡಿ.02. ದ್ಚಿಚಕ್ರ ವಾಹನಗಳೆರಡರ ಮಧ್ಯೆ ಢಿಕ್ಕಿ ಸಂಭವಿಸಿ ಓರ್ವ ಮೃತಪಟ್ಟು ಮೂವರು ಗಂಭೀರ ಗಾಯಗೊಂಡ ಘಟನೆ ನರಿಮೊಗರು ಗ್ರಾಮದ ಕೊಡಿನೀರು ಎಂಬಲ್ಲಿ ಶನಿವಾರದಂದು ನಡೆದಿದೆ.

ಮೃತನನ್ನು ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಪ್ರಥಮ ಪಿಯು ವಾಣಿಜ್ಯ ವಿಭಾಗದ ವಿದ್ಯಾರ್ಥಿ ಸವಣೂರು ಸಮೀಪದ ಅನ್ಯಾಡಿ ನಿವಾಸಿ ಸುಲೈಮಾನ್ ಎಂಬವರ ಪುತ್ರ ಮಹಮ್ಮದ್ ಅನಸ್ ಎಂದು ಗುರುತಿಸಲಾಗಿದೆ. ಟಿವಿಎಸ್ ಅಪಾಚಿ ಬೈಕ್ ಮತ್ತು ಬಜಾಜ್ ಪ್ಲಾಟಿನಾ ಬೈಕ್ ಮಧ್ಯೆ ಮುಖಾಮುಖಿ ಢಿಕ್ಕಿಯಾಗಿ ಈ ದುರ್ಘಟನೆ ಸಂಭವಿಸಿದೆ. ಗಂಭೀರ ಗಾಯಗೊಂಡಿರುವ ಇನ್ನೋರ್ವ ವಿದ್ಯಾರ್ಥಿ ಆಸೀಫ್ ನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವಿಶ್ವನಾಥ್ ಹಾಗೂ ಅಶೋಕ್ ಎಂಬವರನ್ನು ಪುತ್ತೂರಿನ ಆದರ್ಶ ಆಸ್ಪತ್ರೆಗೆ ದಾಖಲಿಸಲಾಗಿದೆ.

Also Read  ಇಂದು ಜಿಲ್ಲೆಯಲ್ಲಿ200ರ ಗಡಿಯತ್ತ ಕೊರೋನಾ..⁉️

ಅಪಘಾತದ ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ತನ್ನ ವಾಹನದಲ್ಲೇ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವ ಮೂಲಕ ಮಾನವೀಯತೆ ಮೆರೆದರು.

error: Content is protected !!
Scroll to Top