ಬಿಗ್ ಬಾಸ್-9 ರ ಗ್ರ್ಯಾಂಡ್ ಫಿನಾಲೆ ಪ್ರವೇಶಿಸಿದ ರೂಪೇಶ್ ಶೆಟ್ಟಿ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 27. ಕನ್ನಡ ಕಿರುತೆರೆಯ ಹಿಟ್ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 9 ರ ಗ್ರ್ಯಾಂಡ್ ಫಿನಾಲೆಗೆ ಇನ್ನು ಒಂದು ವಾರ ಬಾಕಿಯಿದ್ದು, ಇಬ್ಬರು ಫೈನಲಿಸ್ಟ್ ಗಳನ್ನು ನಿರೂಪಕ ಕಿಚ್ಚ ಸುದೀಪ್ ಘೋಷಿಸಿದ್ದಾರೆ.

ಬಿಗ್ ಬಾಸ್ ಸೀಸನ್ 9 ರ ಗ್ರ್ಯಾಂಡ್ ಫಿನಾಲೆಗೂ ಮುನ್ನ ಕೊನೆಯ ವಾರದಲ್ಲಿ ಇಬ್ಬರು ಸ್ಪರ್ಧಿಗಳು ಎಲಿಮಿನೇಟ್ ಆಗಿದ್ದು, ಮಂಗಳೂರಿನ ರೂಪೇಶ್ ಶೆಟ್ಟಿ ಮತ್ತು ರಾಕೇಶ್ ಅಡಿಗ ಫಿನಾಲೆಗೆ ಪ್ರವೇಶಿಸಿದ್ದಾರೆ. ಚಲನಚಿತ್ರ ನಿರ್ದೇಶಕ, ನಟ ಮತ್ತು ಟಿವಿ-ರೇಡಿಯೊ ನಿರೂಪಕರಾಗಿರುವ ರೂಪೇಶ್, ಮನರಂಜನಾ ಉದ್ಯಮದಲ್ಲಿ ಗುರುತಿಸಿಕೊಂಡಿದ್ದು, ಮನರಂಜನಾ ಹಿನ್ನೆಲೆಯ ಹೊರತಾಗಿ, ರೂಪೇಶ್ ತಮ್ಮ ಸಾಮಾಜಿಕ ಕಾರ್ಯಗಳಿಂದಾಗಿ ಹೆಸರುಗಳಿಸಿದ್ದರು.

error: Content is protected !!

Join the Group

Join WhatsApp Group