ಭಾರೀ ಹಿಮಪಾತ- 17 ಮಂದಿ ಮೃತ್ಯು

snowfall

(ನ್ಯೂಸ್ ಕಡಬ) bewskadaba.com ಟೋಕಿಯೊ, ಡಿ. 27. ಭಾರೀ ಹಿಮಪಾತದಿಂದಾಗಿ 17 ಮಂದಿ ಮೃತಪಟ್ಟು, 90ಕ್ಕೂ ಹೆಚ್ಚು ಮಂದಿ ಗಾಯಗೊಂಡ ಕುರಿತು ಜಪಾನ್ ನಲ್ಲಿ ವರದಿಯಾಗಿದೆ.

ಈ ಕುರಿತು ಮಾಹಿತಿ ನೀಡಿದ ಅಲ್ಲಿನ ವಿಪತ್ತು ನಿರ್ವಹಣಾ ಅಧಿಕಾರಿಗಳು, ಹಿಮದಿಂದಾಗಿ 17 ಮಂದಿ ಜೀವ ಕಳೆದುಕೊಂಡಿದ್ದು, ಹಲವು ಮನೆಗಳ ವಿದ್ಯುತ್ ಸಂಪರ್ಕವೂ ಕಳೆದುಕೊಂಡಿದೆ ಎಂದರು. ಕಳೆದ ವಾರ ಜಪಾನ್‌ನ ಉತ್ತರ ಭಾಗದಲ್ಲಿ ಹಿಮಪಾತವಾಗಿ 11 ಮಂದಿ ಮೃತಪಟ್ಟಿದ್ದರು. ಅಲ್ಲದೆ ಮನೆ ಮೇಲೆ ಬಿದ್ದ ಹಿಮ ಸ್ವಚ್ಚಗೊಳಿಸುವ ವೇಳೆ ಜಾರಿ ಬಿದ್ದುಹಲವರು ಮತಪಟ್ಟಿದ್ದರು. ಭಾರೀ ಹಿಮದಿಂದಾಗಿ ವಾಹನ ಸಂಚಾರಕ್ಕೂ ತೊಡಕಾಗಿದ್ದು, ರೈಲು, ವಿಮಾನ ಸಂಚಾರಗಳನ್ನು ಮೊಟಕುಗೊಳಿಸಲಾಗಿದೆ ಎಂದು ಸಾರಿಗೆ ಸಚಿವಾಲಯ ತಿಳಿಸಿದೆ.

Also Read  ದಂಡ ಹಾಕಲು ತೆರಳಿದ ಪೊಲೀಸರ ತಲೆದಂಡ | ಹಿಗ್ಗಾಮುಗ್ಗ ಥಳಿಸಿದ ಸಾರ್ವಜನಿಕರು ➤ ವೀಡಿಯೋ ವೈರಲ್

error: Content is protected !!
Scroll to Top