ಮನೆ ಮುಂದೆ ಕಟ್ಟಿಹಾಕಿದ್ದ ನಾಯಿಯನ್ನ ಹೊತ್ತೊಯ್ದ ಚಿರತೆ..!

(ನ್ಯೂಸ್ ಕಡಬ) newskadaba.com ಮಂಡ್ಯ, ಡಿ. 27. ಸಕ್ಕರೆ ನಗರಿಯಲ್ಲಿ ಚಿರತೆ ಉಪಟಳ ಹೆಚ್ಚಾಗಿದ್ದು, ಮನೆ ಮುಂದೆ ಕಟ್ಟಿಹಾಕಿದ್ದ ನಾಯಿಯನ್ನ ಚಿರತೆ ಹೊತ್ತೊಯ್ದ ಘಟನೆ ಜಿಲ್ಲೆಯ ಕೆ.ಆರ್​.ಪೇಟೆ ತಾಲೂಕಿನ ಚಟ್ಟಂಗೆರೆಯಲ್ಲಿ ನಡೆದಿದೆ.

ಗ್ರಾಮದ ಸುತ್ತಮುತ್ತ ಹಲವು ಬಾರಿ ಚಿರತೆ ಪ್ರತ್ಯಕ್ಷ ಗೊಂಡಿದ್ದು, ಇದೀಗ ನಾಯಿಯನ್ನು ಹೊತ್ತೊಯ್ದಿದೆ. ಇದು ಸಹಜವಾಗಿ ಚಟ್ಟಂಗೆರೆ ಗ್ರಾಮಸ್ಥರಲ್ಲಿದ್ದ ಆತಂಕವನ್ನು ಹೆಚ್ಚಿಸಿದೆ. ಹೊಲ ಗದ್ದೆಗಳಿಗೆ, ರಸ್ತೆಗೆ ಇಳಿಯಲು ಜನರು ಭಯಪಡುವಂತಾಗಿದೆ. ಚಿರತೆ ಪ್ರತ್ಯಕ್ಷದ ಬಗ್ಗೆ ಅರಣ್ಯ ಇಲಾಖೆಗೆ ಹಲವು ಬಾರಿ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

Also Read  ಸಸಿಹಿತ್ಲು ಶಾಂಭವಿ ನದಿ ತೀರದಲ್ಲಿ ಅಪರಿಚಿತ ಶವ ಪತ್ತೆ

error: Content is protected !!
Scroll to Top