ರಾಜ್ಯದಲ್ಲಿ ಕೋವಿಡ್ ಹರಡುವ ಭೀತಿ ➤ ಬೂಸ್ಟರ್ ಡೋಸ್ ಗೆ ಮುಗಿಬಿದ್ದ ಜನ..! 

(ನ್ಯೂಸ್ ಕಡಬ) newskadaba.com ನವದೆಹಲಿ, ಡಿ. 27.ಕೊರೋನಾ ರೂಪಾಂತರಿ ಬಿಎಫ್.7 ಹರಡುವಿಕೆಯ ಭೀತಿಯಿಂದ ಕಳೆದ ನಾಲ್ಕೈದು ದಿನಗಳಿಂದ ಜನರು ಬೂಸ್ಟರ್ ಡೋಸ್ ಪಡೆಯುವುದಕ್ಕೆ ಮುಗಿಬೀಳುತ್ತಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲಿ ಅಷ್ಟಾಗಿ ಕಂಡುಬರದಿದ್ದರೂ, ಸರ್ಕಾರಿ ಕೋವಿಡ್ ಲಸಿಕೆ ಕೇಂದ್ರಗಳಲ್ಲಿ ಬೂಸ್ಟರ್ ಡೋಸ್ ಪಡೆಯುವವರ ಸಂಖ್ಯೆ ಹೆಚ್ಚಾಗಿದೆ ಎಂದು ಅಂಕಿಅಂಶ ತಿಳಿಸಿದೆ.

ಅಧಿಕೃತ ಮಾಹಿತಿಯ ಪ್ರಕಾರ, ಕಳೆದ 30 ದಿನಗಳಲ್ಲಿ ಮೊದಲ ಬಾರಿಗೆ ಒಂದು ದಿನದಲ್ಲಿ ಒಟ್ಟಾರೆ ವ್ಯಾಕ್ಸಿನೇಷನ್ 2,000 ಲಸಿಕೆಗಳನ್ನು ದಾಟಿದೆ. ಬೂಸ್ಟರ್ ಡೋಸ್ ಲಸಿಕೆ ಪಡೆದವರ ಒಟ್ಟು ಸಂಖ್ಯೆ 2,139 ಆಗಿತ್ತು. ಅವುಗಳಲ್ಲಿ, ಮುನ್ನೆಚ್ಚರಿಕೆ ಡೋಸ್ 1,681 ಆಗಿದೆ. ಸರಾಸರಿಯಾಗಿ, ದೈನಂದಿನ ಬೂಸ್ಟರ್ ಡೋಸ್ ಪಡೆದವರ ಅಂಕಿ ಅಂಶಗಳು 700 ಮತ್ತು 900 ರ ನಡುವೆ ಇದ್ದು, ಕೋವಿಡ್  ಹರಡುವ ಭೀತಿ ಎದುರಾದ ನಂತರ ಈ ಪ್ರಮಾಣ ಹೆಚ್ಚಳವಾಗಿದೆ ಎನ್ನಲಾಗಿದೆ.

Also Read  ವಿಟ್ಲ: ಮಹಿಳೆಯ ಜೊತೆ ಅನುಚಿತ ವರ್ತನೆ ► ಯುವಕ ಪೊಲೀಸ್ ವಶಕ್ಕೆ

 

error: Content is protected !!
Scroll to Top