ನೆಲ್ಯಾಡಿ: ನೀರುಪಾಲಾಗಿದ್ದ ವ್ಯಕ್ತಿಯ ಮೃತದೇಹ ಪತ್ತೆ

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಡಿ. 27. ಮೀನು ಹಿಡಿಯಲೆಂದು ಹೋಗಿ ನೇತ್ರಾವತಿ ನದಿಯಲ್ಲಿ ಡಿ. 26ರಂದು ನೀರುಪಾಲಾಗಿದ್ದ ವ್ಯಕ್ತಿಯ ಮೃತದೇಹವು ಇಂದು ಪತ್ತೆಯಾಗಿರುವ ಕುರಿತು ವರದಿಯಾಗಿದೆ.


ಮೃತರನ್ನು ಮೊಗ್ರು ದಂಡುಗ ನಿವಾಸಿ ಜನಾರ್ಧನ ಎಂದು ಗುರುತಿಸಲಾಗಿದೆ. ಜನಾರ್ಧನ ಹಾಗೂ ಮಹೇಶ್ ಎಂಬವರು ಮುಗೇರಡ್ಕದ ಕಾಮಗಾರಿ ಹಂತದ ಸೇತುವೆಯ ಬಳಿ ನೇತ್ರಾವತಿ ನದಿಯಲ್ಲಿ ಮೀನು ಹಿಡಿಯಲೆಂದು ಹೋಗಿದ್ದ ಸಂದರ್ಭ ಜನಾರ್ಧನ ರವರು ನೀರುಪಾಲಾಗಿದ್ದರು. ಆದರೆ ಜೊತೆಗಿದ್ದ ಮಹೇಶ್ ವಿಷಯ ಯಾರಿಗೂ ತಿಳಿಸದೇ ತನ್ನ ಪಾಡಿಗೆ ವಾಪಸ್ ಬಂದಿದ್ದರು. ನೀರಿಗೆ ಬಿದ್ದ ವಿಷಯ ತಡವಾಗಿ ಬೆಳಕಿಗೆ ಬಂದಿದ್ದರಿಂದ ಸೋಮವಾರ ರಾತ್ರಿ ಅಗ್ನಿಶಾಮಕ ದಳ ಸಿಬ್ಬಂದಿಗಳು ಹಾಗೂ ಪೊಲೀಸರು ಹುಡುಕಾಟ ಆರಂಭಿಸಿದ್ದರು. ಇಂದು ಮುಂಜಾನೆ ಮೃತದೇಹ ಪತ್ತೆಯಾಗಿದೆ ಎನ್ನಲಾಗಿದೆ.

Also Read  ಫೇಸ್​ಬುಕ್ ಗೆಳತಿ ಭೇಟಿಗೆ ದೂರದಿಂದ ಬಂದ ಯುವಕ ➤ ಗೆಳತಿ ಕಂಡು ಬೆಚ್ಚಿ ಬಿದ್ದು ಚಾಕು ಎಸೆದ.!!

error: Content is protected !!
Scroll to Top