ಕೊರಿಯರ್ ಶಾಪ್ ಗೆ ಪಾರ್ಸೆಲ್ ಗೆ ಬಂದಿದ್ದ ಮಿಕ್ಸಿ ಬ್ಲಾಸ್ಟ್   ➤ ಮಾಲಿಕನಿಗೆ ಗಂಭೀರ ಗಾಯ                    

(ನ್ಯೂಸ್ ಕಡಬ) newskadaba.com ಹಾಸನ, ಡಿ. 27. ಹಾಸನ ನಗರದ ಕೆ.ಆರ್.ಪುರಂ ಬಡಾವಣೆಯ ಸಬ್ ರಿಜಿಸ್ಟರ್ ಕಛೇರಿ ರಸ್ತೆಯಲ್ಲಿರುವ ಕೊರಿಯರ್ ಶಾಪ್ ಗೆ ಪಾರ್ಸಲ್ ಬಂದಿದ್ದ ಮಿಕ್ಸಿ ಬ್ಲಾಸ್ಟ್ ಆಗಿರುವ ಘಟನೆ ಸಂಭವಿಸಿದೆ.

ಎರಡು ದಿನಗಳ ಹಿಂದೆ ಮಿಕ್ಸಿ ಕೊರಿಯರ್​​ ಬಂದಿದ್ದು, ನಗರದ ವ್ಯಕ್ತಿಯೊಬ್ಬರಿಗೆ ಡೆಲಿವರಿ ಮಾಡಲಾಗಿತ್ತು. ಆದರೆ ಆ ವ್ಯಕ್ತಿ ಸೂಕ್ತ ವಿಳಾಸದಿಂದ ಬಂದಿಲ್ಲವೆಂದು ವಾಪಸ್ ಮಾಡಿದ್ದರು. ವಾಪಸ್ ಪಡೆಯುವ ವೇಳೆ ಕೊರಿಯರ್ ಮಾಲೀಕ ಮಿಕ್ಸಿ ಆನ್ ಮಾಡಿ ಪರಿಶೀಲನೆ ನಡೆಸುವಾಗ ಮಿಕ್ಸಿ ಬ್ಲಾಸ್ಟ್ ಆಗಿದೆ. ಪರಿಣಾಮ ಕಚೇರಿ ಗ್ಲಾಸ್ ಪುಡಿಪುಡಿಯಾಗಿದ್ದು, ಗೋಡೆಗಳಿಗೆ ಹಾನಿಯಾಗಿದೆ. ಮಾಲೀಕ ಶಶಿ ಎಂಬವರ ಕೈ, ಹೊಟ್ಟೆ ಹಾಗೂ ತಲೆಯ ಭಾಗಕ್ಕೆ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಈ ಕುರಿತು ಹಾಸನ ಬಡಾವಣೆ ಪೊಲೀಸ್​ ಠಾಣೆಯಲ್ಲಿ ಕೇಸ್​ ದಾಖಲಾಗಿದೆ.

Also Read  ಮತ್ತೆ ಸದ್ದು ಮಾಡಿದ ಪಕ್ಷಾಂತರ ರಾಜಕೀಯ.!        ➤ ಕಾಂಗ್ರೆಸ್‌ ಸೇರಿದ ಗುಬ್ಬಿ ಶ್ರೀನಿವಾಸ್‌                    

 

error: Content is protected !!
Scroll to Top