(ನ್ಯೂಸ್ ಕಡಬ) newdkadaba.com ಬೆಂಗಳೂರು, ಡಿ. 27. ಆದಾಯ ತೆರಿಗೆ ಇಲಾಖೆ ಮತ್ತೊಮ್ಮೆ ಪಾನ್ ಕಾರ್ಡ್ ಹೊಂದಿರುವವರಿಗೆ ಎಚ್ಚರಿಕೆಯ ಕರೆ ನೀಡಿದ್ದು, ಮಾರ್ಚ್ 31 ರೊಳಗೆ ಪ್ಯಾನ್ ಕಾರ್ಡ್ ಅನ್ನು ಆಧಾರ್ ನೊಂದಿಗೆ ಲಿಂಕ್ ಮಾಡಬೇಕು. ಇಲ್ಲದಿದ್ದಲ್ಲಿ ಎಪ್ರಿಲ್ 1ರಿಂದ ಪಾನ್ ಕಾರ್ಡ್‌ಗಳನ್ನು ಬಂದ್ ಮಾಡಲಾಗುತ್ತದೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.
ನೀವು ಏಪ್ರಿಲ್ 1 ರಿಂದ ಆಧಾರ್ ಲಿಂಕ್ ಆಗದ ಪ್ಯಾನ್ ಕಾರ್ಡ್ ಅನ್ನು ಬಳಸಿದಲ್ಲಿ, ಆದಾಯ ತೆರಿಗೆ ಇಲಾಖೆಯು ನಿಮಗೆ 10,000 ರೂಪಾಯಿ ದಂಡ ವಿಧಿಸಬಹುದು. ಪ್ರಸ್ತುತ, ಪ್ಯಾನ್ ಕಾರ್ಡ್ ಅನ್ನು ಆಧಾರ್ ನೊಂದಿಗೆ ಲಿಂಕ್ ಮಾಡಲು, ನೀವು 1000 ಸಾವಿರ ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ. ನಿಮ್ಮ ಪ್ಯಾನ್ ಕಾರ್ಡ್ ನಿಷ್ಕ್ರಿಯಗೊಂಡರೆ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (CBDT) 30 ಜೂನ್ 2022 ರಿಂದ ತಡವಾಗಿ ಶುಲ್ಕವನ್ನು ವಿಧಿಸುತ್ತಿದೆ. ಆದಾಯ ತೆರಿಗೆ ಕಾಯಿದೆ, 1961ರ ಪ್ರಕಾರ ವಿನಾಯಿತಿ ವರ್ಗದಡಿಯಲ್ಲಿ ಬರದ ಜನರು ಎಂದು ತಿಳಿಸಿದೆ. ಅವರ ಪ್ಯಾನ್ ಕಾರ್ಡ್‌ಗಳು ಏಪ್ರಿಲ್ 1 ರಿಂದ ನಿಷ್ಕ್ರಿಯಗೊಳ್ಳುತ್ತವೆ. ಹೀಗೆ ನಿಷ್ಕ್ರಿಯಗೊಂಡಲ್ಲಿ ಅದನ್ನು ಮ್ಯೂಚುವಲ್ ಫಂಡ್ ಅಥವಾ ಸ್ಟಾಕ್ ಖಾತೆಗೆ ಬಳಸಲಾಗುವುದಿಲ್ಲ. ಇದಲ್ಲದೆ, ನೀವು ಈ ಕಾರ್ಡ್ ಅನ್ನು ಎಲ್ಲಾದರು ಡಾಕ್ಯುಮೆಂಟ್ ಆಗಿ ಬಳಸಿದರೆ, ನಿಮಗೆ 10,000 ರೂ. ದಂಡ ವಿಧಿಸಬಹುದು. ಆದಾಯ ತೆರಿಗೆ ಕಾಯ್ದೆ, 1961 ರ ಸೆಕ್ಷನ್ 272B ಅಡಿಯಲ್ಲಿ ಆದಾಯ ತೆರಿಗೆ ಇಲಾಖೆಯು ನಿಮ್ಮಿಂದ 10,000 ರೂ.ಗಳನ್ನು ವಸೂಲಿ ಮಾಡಬಹುದು.
ಪಾನ್ ಕಾರ್ಡ್ ಅನ್ನು ಲಿಂಕ್ ಮಾಡುವ ವಿಧಾನ
1. ನೀವು ಮನೆಯಲ್ಲಿಯೇ ಆದಾಯ ತೆರಿಗೆ ಇಲಾಖೆಯ ಇ-ಫೈಲಿಂಗ್ ವೆಬ್‌ಸೈಟ್‌ಗೆ ಭೇಟಿ ನೀಡಿ.
2.ಇಲ್ಲಿ ನೀವು ಪ್ಯಾನ್ ಕಾರ್ಡ್ ಅನ್ನು ಆಧಾರ್ ಸಂಖ್ಯೆಯೊಂದಿಗೆ ಲಿಂಕ್ ಮಾಡಬಹುದು.
3. ಇದರ ನಂತರ ನೀವು ನಿಮ್ಮ ಮಾಹಿತಿಯನ್ನು ನಮೂದಿಸಬೇಕು. ಸ್ವಂತ ಹೆಸರು ಮತ್ತು ಹುಟ್ಟಿದ ದಿನಾಂಕದಂತೆ.
4. ನಿಮ್ಮ ಆಧಾರ್ ಕಾರ್ಡ್‌ನಲ್ಲಿ ಜನ್ಮ ದಿನಾಂಕವನ್ನು ಬಾಕ್ಸ್ ಮೇಲೆ ಬಲ ಗುರುತು ಹಾಕಿ.
5. ಪರಿಶೀಲಿಸಲು ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ.
6. ಇದರ ನಂತರ ನೀವು “Link Aadhaar” ಅನ್ನು ನೋಡುತ್ತೀರಿ, ಅದರ ಮೇಲೆ ಕ್ಲಿಕ್ ಮಾಡಿ. ಈ ರೀತಿಯಾಗಿ ನಿಮ್ಮ ಪ್ಯಾನ್ ಕಾರ್ಡ್ ಅನ್ನು ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡಲಾಗುತ್ತದೆ.