ಮಂಗಳೂರು: ಕಾರಿನಲ್ಲಿ ಲಕ್ಷಾಂತರ ರೂ. ಮೌಲ್ಯದ ಗಾಂಜಾ ಸಾಗಾಟ ➤ ನಾಲ್ವರ ಬಂಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 26. ಕಾರಿನಲ್ಲಿ ಲಕ್ಷಾಂತರ ರೂ. ಮೌಲ್ಯದ ಗಾಂಜಾ ಸಾಗಾಟಕ್ಕೆ ಯತ್ನಿಸಿದ ನಾಲ್ವರು ಆರೋಪಿಗಳನ್ನು, ಸೊತ್ತುಗಳ ಸಹಿತ ಕೊಣಾಜೆ ಪೊಲೀಸರು ವಶಕ್ಕೆ ಪಡೆದ ಘಟನೆ ವರದಿಯಾಗಿದೆ.


ಬಂಧಿತರನ್ನು ಮಹಮ್ಮದ್ ನೌಫಲ್, ಜಂಶೀರ್ ಎಂ, ಮಹಮ್ಮದ್ ಬಾತೀಶ್ ಹಾಗೂ ಮಹಮ್ಮದ್ ಅಶ್ರಫ್ ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಗಳಿಂದ 32 ಕೆಜಿ ತೂಕದ 3 ಲಕ್ಷ 19ಸಾವಿರ ಮೌಲ್ಯದ ನಿಷೇಧಿತ ಮಾದಕ ದ್ರವ್ಯ, ಆರೋಪಿಗಳು ಬಳಸಿದ 13 ಸಾವಿರ ಮೌಲ್ಯದ 4 ಮೊಬೈಲ್ ಗಳ ಸಹಿತ 3ಲಕ್ಷ ರೂ. ಮೌಲ್ಯದ ಕಾರನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ಅಲ್ಟೋ ಕಾರಿನಲ್ಲಿ, ಮಾದಕ ದ್ರವ್ಯ ಸಾಗಾಟ ಮಾಡುತ್ತಿದ್ದ ಖಚಿತ ಮಾಹಿತಿಯ ಮೇರೆಗೆ, ರೌಂಡ್ಸ್ ನಲ್ಲಿದ ಕೊಣಾಜೆ ಠಾಣಾ ಪೊಲೀಸ್ ಉಪನಿರೀಕ್ಷಕ ಶರಣಪ್ಪ ಭಂಡಾರಿರವರು ಬೆಂಗಳೂರಿಂದ ಉಪ್ಪಿನಂಗಡಿ, ಮೆಲ್ಕಾರು, ಬೋಳಿಯಾರು ಮಾರ್ಗವಾಗಿ ಕೇರಳ ಕಡೆಗೆ ತೆರಳುತ್ತಿದ್ದ ಕಾರನ್ನು ಚೇಳೂರು ಚೆಕ್ ಪೋಸ್ಟ್ ಬಳಿ ತಡೆಹಿಡಿದು ಆರೋಪಿಗಳನ್ನು ಬಂಧಿಸಿದ್ದಾರೆ‌.

Also Read  ಐವರ್ನಾಡು: ಅಪಾಯಕಾರಿ ಸ್ಥಿತಿಯಲ್ಲಿದ್ದ ಮರಗಳ ತೆರವು

error: Content is protected !!
Scroll to Top