ರೈಲು ಢಿಕ್ಕಿ- 90 ಕುರಿಗಳು ಹಾಗೂ 8 ರಣಹದ್ದುಗಳು ಸಾವು         

(ನ್ಯೂಸ್ ಕಡಬ) newskadaba.com ಲಕ್ನೋ, ಡಿ. 26. ರೈಲು ಢಿಕ್ಕಿ ಹೊಡೆದ ಪರಿಣಾಮ 90 ಕುರಿಗಳು ಮತ್ತು 8 ರಣಹದ್ದುಗಳು ಮೃತಪಟ್ಟಿರುವ ಘಟನೆ ಉತ್ತರಪ್ರದೇಶದ ಬಲರಾಮಪುರದ ಪಂಚ ಪರ್ವ ಪೊಲೀಸ್ ಠಾಣೆ ವ್ಯಾಪ್ತಿಯ ಸರಯು ಸೇತುವೆ ಬಳಿ ಸಂಭವಿಸಿದೆ.

ನಾಯಿಗಳು ಕುರಿಗಳ ಹಿಂಡನ್ನು ಅಟ್ಟಾಡಿಸಿಕೊಂಡು ಬಂದಿದ್ದರಿಂದ ಗಾಬರಿಗೊಂಡ ಕುರಿಗಳು ರೈಲ್ವೆ ಹಳಿ ಮೇಲೆ ಬಂದಿವೆ. ಈ ಸಂದರ್ಭ ಆ ಮಾರ್ಗದಲ್ಲಿ ಬಂದ ರೈಲೊಂದು ಢಿಕ್ಕಿ ಹೊಡೆದು ಕುರಿಗಳು ಸಾವಿಗೀಡಾಗಿವೆ. ಇದಾದ ಸ್ವಲ್ಪ ಸಮಯದ ಬಳಿಕ ಸತ್ತ ಕುರಿಗಳ ಮಾಂಸ ತಿನ್ನಲು ಬಂದಿದ್ದ ರಣಹದ್ದುಗಳಿಗೆ ಮತ್ತೊಂದು ರೈಲು ಢಿಕ್ಕಿ ಹೊಡೆದಿದೆ.

Also Read  NMPT ಯ 13 ಮಂದಿ ಕಾರ್ಮಿಕರಿಗೆ ಕೊರೊನಾ ಪಾಸಿಟಿವ್ ➤ ಬಂದರು ಕಾರ್ಯಕ್ಕೆ ಅಡ್ಡಿ..!

error: Content is protected !!
Scroll to Top