ಕಾಫಿ ಬೆಳೆಗಾರರಿಗೆ 6,590 ಕೋಟಿ ರೂ. ಬಿಡುಗಡೆ   ➤ ಆರ್.ಅಶೋಕ್

(ನ್ಯೂಸ್ ಕಡಬ) newskadaba.com ಬೆಳಗಾವಿ, ಡಿ. 26. ಅಕಾಲಿಕ ಮಳೆಯಿಂದ ಹಾನಿಗೊಳಗಾಗಿರುವ ಕಾಫಿ ಬೆಳೆಗಾರರಿಗೆ ನೆರವು ನೀಡಲು ರಾಜ್ಯ ಸರ್ಕಾರ  6590 ಕೋಟಿ ರೂ. ಬಿಡುಗಡೆ ಮಾಡಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ವಿಧಾನಸಭೆಯಲ್ಲಿಂದು ತಿಳಿಸಿದರು.

.
ಮಳೆಯಿಂದಾಗಿ ಮೂಡಿಗೆರೆ, ಕಳಸ ಸೇರಿದಂತೆ ರಾಜ್ಯದ ವಿವಿಧೆಡೆ ಕಾಫಿ ಬೆಳೆಗಾರರಿಗೆ ಹಾನಿಯುಂಟಾಗಿದೆ. 13,276 ಎಕರೆ ಬೆಳೆ ಹಾನಿ ಉಂಟಾಗಿದ್ದು, ನೆರವು ನೀಡಲು ಸರ್ಕಾರ ಕ್ರಮ ಕೈಗೊಂಡಿದೆ ಎಂದು ಎಂ.ಪಿ. ಕುಮಾರಸ್ವಾಮಿ ಅವರ ಪ್ರಶ್ನೆಗೆ ಉತ್ತರಿಸಿದರು. ಹವಾಮಾನ ವೈಪರೀತ್ಯದಿಂದ ಕಾಫಿ ಬೆಳೆಗಾರರಿಗೆ ಹಾನಿಯುಂಟಾಗಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಬೆಳೆಗಾರರಿಗೆ ಯಾವುದೇ ಹಾನಿಯುಂಟಾಗದಂತೆ ನೆರವು ನೀಡಲು ಸರ್ಕಾರ ಬದ್ಧವಾಗಿದೆ ಎಂದು ಅವರು ತಿಳಿಸಿದರು.

Also Read  ಮೇಕೆಯನ್ನು ರಕ್ಷಿಸಲು ಹೋದ ಯುವಕ ಕೆರೆಗೆ ಬಿದ್ದು ಮೃತ್ಯು

 

error: Content is protected !!
Scroll to Top