ಉಪ್ಪಿನಂಗಡಿ: ನಾಯಿ ಅಡ್ಡ ಬಂದು ಸ್ಕೂಟರ್ ಪಲ್ಟಿ ➤ ಸಹಸವಾರನಿಗೆ ಗಾಯ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಡಿ. 26. ನಾಯಿಯೊಂದು ರಸ್ತೆಗೆ ಅಡ್ಡ ಬಂದು ಆಕ್ಟಿವಾ ಹೋಂಡಾಗೆ ಢಿಕ್ಕಿಯಾದ ಪರಿಣಾಮ ಆಕ್ಟಿವಾ ಪಲ್ಟಿಯಾಗಿ ಸಹ ಸವಾರ ಗಂಭೀರ ಗಾಯಗೊಂಡ ಘಟನೆ ಇಲ್ಲಿನ ಕಡವಿನಬಾಗಿಲು ತಿರುವಿನಲ್ಲಿ ನಡೆದಿದೆ.


ಗಾಯಗೊಂಡವರನ್ನು ಇಳಂತಿಲ ಗ್ರಾಮದ ಕಡವಿನಬಾಗಿಲು ನಿವಾಸಿ ರಮ್ಲಾನ್ ಫಯಾಝ್ ಹಾಗೂ ಇಮ್ರಾನ್ ಎಂದು ಗುರುತಿಸಲಾಗಿದೆ. ಭಾನುವಾರ ರಾತ್ರಿ ಉಪ್ಪಿನಂಗಡಿಯಿಂದ ಕಡವಿನಬಾಗಿಲಿನ ತಮ್ಮ ಮನೆಗೆ ಹೋಗುವ ವೇಳೆ ಈ ಅವಘಡ ಸಂಭವಿಸಿದೆನ್ನಲಾಗಿದೆ‌. ಅಪಘಾತದಿಂದ ಫಯಾಝ್ ಎಂಬವರ ಕೈ ಹಾಗೂ ಕಾಲು ಮೂಳೆ ಮುರಿತಕ್ಕೊಳಗಾಗಿದ್ದು, ಸವಾರ ಇಮ್ರಾನ್ ರವರಿಗೆ ಸಣ್ಣಪುಟ್ಟ ತರಚಿದ ಗಾಯವಾಗಿ ಅಪಾಯದಿಂದ ಪಾರಾಗಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Also Read  ಹಳೆ ಸಾಮಗ್ರಿಗಳನ್ನು ಕದ್ದು ಸಾಗಾಟ ➤ ಆರೋಪಿ ಅರೆಸ್ಟ್

error: Content is protected !!
Scroll to Top