ಅಡಕೆಗೆ ಎಲೆ ಚುಕ್ಕಿ, ಹಳದಿ ರೋಗ ಬಾಧೆ- ಪರಿಹಾರ ➤ ಕೇರಳಕ್ಕೆ ಮಾದರಿಯಾದ ಕರ್ನಾಟಕ                           

(ನ್ಯೂಸ್ ಕಡಬ) newskadaba.com ಕಾಸರಗೋಡು, ಡಿ. 26. ಕಾಸರಗೋಡು ಜಿಲ್ಲೆಯಲ್ಲಿ ಎಲೆ ಚುಕ್ಕಿ ಮತ್ತು ಹಳದಿ ರೋಗಗಳಿಂದ ಸಂಕಷ್ಟದಲ್ಲಿರುವ ಅಡಕೆ ಕೃಷಿಕರ ನೆರವಿಗೆ ಯೋಜನೆ ಸಿದ್ಧವಾಗಿದೆ. ಅಡಕೆ ಬೆಳೆಗಾರರಿಗೆ ಕೀಟನಾಶಕ ಸಿಂಪಡಿಸಲು ನೆರವು ನೀಡುವಂತೆ ಪ್ರಿನ್ಸಿಪಲ್‌ ಕೃಷಿ ಅಧಿಕಾರಿ ಮಿನಿ ಜೋನ್‌ ಕೃಷಿ ನಿರ್ದೇಶಕರಿಗೆ ಶೀಘ್ರ ನಿರ್ದೇಶನ ನೀಡಲಿದ್ದಾರೆ. ಮೊದಲ ಹಂತವಾಗಿ ಕೀಟನಾಶಕ ಸಿಂಪಡನೆಗೆ 30 ಲಕ್ಷ ರೂ. ಬೇಕಾಗಲಿದೆ ಎಂದು ಅಂದಾಜಿಸಲಾಗಿದೆ.

ಅಡಕೆ ಬೆಳೆಗಾರರ ಸಂಕಷ್ಟವನ್ನು ಕಾಸರಗೋಡು ಶಾಸಕ ಎನ್‌.ಎ. ನೆಲ್ಲಿಕ್ಕುನ್ನು ಕೇರಳದ ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ್ದರು. ಕಾಸರಗೋಡು ಜಿಲ್ಲೆಯಲ್ಲಿ ಅಡಕೆಗೆ ಬಾಧಿಸುವ ರೋಗಗಳ ಅಧ್ಯಯನಕ್ಕೆ ವಿಶೇಷ ತಂಡ ನೇಮಿಸಲಾಗಿದೆ ಎಂದು ಕೇರಳದ ಕೃಷಿ ಸಚಿವ ಪಿ. ಪ್ರಸಾದ್‌ ತಿಳಿಸಿದ್ದರು. ಎರಡನೇ ಹಂತದಲ್ಲಿ ಇದಕ್ಕಿಂತ ಹೆಚ್ಚಿನ ಮೊತ್ತ ಬೇಕಾಗಬಹುದು ಎಂದೆನ್ನಲಾಗಿದೆ.

 

 

error: Content is protected !!

Join the Group

Join WhatsApp Group