ಚೀನಾದಿಂದ ಭಾರತಕ್ಕೆ ಆಗಮಿಸಿದ ವ್ಯಕ್ತಿಯಲ್ಲಿ ಕೊರೋನಾ ಸೋಂಕು ಪತ್ತೆ…!!!      ➤ ಹೆಚ್ಚಿದ ಆತಂಕ       

(ನ್ಯೂಸ್ ಕಡಬ) newskadaba.com.  ಚೀನಾದ ಕೋವಿಡ್ ರೂಪಾಂತರಿ ಭೀತಿ ಭಾರತದಲ್ಲಿ ಹೆಚ್ಚುತ್ತಿದ್ದು, ಕರ್ನಾಟಕದಲ್ಲಿ ಕೊರೋನಾ ಸೋಂಕು ಹರಡದಂತೆ ಅಗತ್ಯ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ಮುಂದಾಗಿದೆ.  ಈ ನಡುವೆ ಚೀನಾದಿಂದ ಬೆಂಗಳೂರಿಗೆ ಆಗಮಿಸಿದ ವ್ಯಕ್ತಿಯೊಬ್ಬರಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು ಕೋವಿಡ್ ಭೀತಿ ಇನ್ನಷ್ಟು ಹೆಚ್ಚಿಸಿದೆ.

ನಿನ್ನೆ ಚೀನಾದಿಂದ ಬಂದ 40 ವರ್ಷದ ವ್ಯಕ್ತಿಯನ್ನು ಕೋವಿಡ್ ತಪಾಸಣೆಗೆ ಒಳಪಡಿಸಲಾಗಿದೆ. ಅದರಂತೆ ಬಂದ ವರದಿಯಲ್ಲಿ ಪಾಸಿಟಿವ್ ಕಾಣಿಸಿಕೊಂಡಿದ್ದು, ತಕ್ಷಣವೇ ಖಾಸಗಿ ಆಸ್ಪತ್ರೆಗೆ ರವಾನಿಸಿ ಐಸೋಲೇಷನ್ ಮಾಡಲಾಗಿದ್ದು, ಹೆಚ್ಚಿನ ತಪಾಸಣೆಗಾಗಿ ವ್ಯಕ್ತಿಯ ಮಾದರಿ ಸಂಗ್ರಹ ಮಾಡಿ ಜಿನೋಮಿಕ್ ಸೀಕ್ವೆನ್ಸಿಂಗ್​ಗೆ ರವಾನಿಸಲಾಗಿದೆ..

Also Read  ಖಾಸಗಿ ಕಾಲೇಜಿನಲ್ಲಿ ವಿದ್ಯಾರ್ಥಿ ಅನುಮಾನಸ್ಪದ ಸಾವು ಪ್ರಕರಣ - ಆರು ಆರೋಪಿಗಳ ಬಂಧನ

 

error: Content is protected !!
Scroll to Top