ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರ ಸಂಘದ ತಾಲೂಕು ಘಟಕ ರಚನೆ ➤ ಅಧ್ಯಕ್ಷರಾಗಿ ನಿಂಗರಾಜು, ಪ್ರ.ಕಾರ್ಯದರ್ಶಿಯಾಗಿ ಸೀತಾರಾಮ ಕೆ.ಜಿ ಪಲ್ಲತ್ತಾರು ಆಯ್ಕೆ

(ನ್ಯೂಸ್ ಕಡಬ) newskadaba.com ಆಲಂಕಾರು, ಡಿ. 26. ಕಡಬ ತಾಲೂಕು ಸರಕಾರಿ ಪ್ರಾಥಮಿಕ ಶಾಲೆಗಳ ಮುಖ್ಯ ಗುರುಗಳ ಸಂಘ ಇದರ ನೂತನ ಪದಾಧಿಕಾರಿಗಳ ಆಯ್ಕೆಯನ್ನು ಕಡಬ ಮಾದರಿ ಶಾಲೆಯಲ್ಲಿ ನಡೆದ ಸಭೆಯಲ್ಲಿ ಮಾಡಲಾಯಿತು.

ನೂತನ ಅಧ್ಯಕ್ಷರಾಗಿ ದ.ಕ.ಜಿ.ಪಂ. ಹಿ. ಪ್ರಾಥಮಿಕ ಶಾಲೆ ಆಲಂಕಾರಿನ ಮುಖ್ಯಗುರುಗಳಾದ ನಿಂಗರಾಜು ಕೆ.ಪಿ, ಪ್ರಧಾನ ಕಾರ್ಯದರ್ಶಿಯಾಗಿ ಸೀತಾರಾಮ ಕೆ.ಜಿ ಪಲ್ಲತ್ತಾರು, ಕೋಶಾಧಿಕಾರಿಯಾಗಿ ಹಮೀದ್ ಕೆ ಕಡಬ, ಉಪಾಧ್ಯಕ್ಷರುಗಳಾಗಿ ಶಾರದಾ ಮತ್ತು ವಾರಿಜ, ಜಂಟಿ ಕಾರ್ಯದರ್ಶಿಗಳಾಗಿ ಕುಶಾಲಪ್ಪ ಡಿ. ಹಾಗೂ ಮಹೇಶ್, ಸಂಘಟನಾ ಕಾರ್ಯದರ್ಶಿಗಳಾಗಿ ಪುಂಡಲೀಕ ಪೂಜಾರ್, ನೀಲಯ್ಯ ನಾಯ್ಕ, ಗೌರವಾಧ್ಯಕ್ಷರಾಗಿ ಕಾಮರಾಜು ಕೆ. ಸಿ, ಗೌರವ ಸಲಹೆಗಾರರಾಗಿ ಶೇಖರ ಎ.ಡಿ, ವೀಣಾಕುಮಾರಿ, ಕ್ಲಸ್ಟರ್ ಪ್ರತಿನಿಧಿಗಳಾಗಿ ಕಡಬ ಮಿನಿ ವರ್ಗೀಸ್, ಬಂಟ್ರ ರಾಮಕೃಷ್ಣ, ನೂಜಿಬಾಳ್ತಿಲ ಮೇದಪ್ಪಗೌಡ, ನೆಲ್ಯಾಡಿ ಆನಂದ, ಆಲಂಕಾರು ಸುಚೇತಾ ಕುಮಾರಿ, ರಾಮಕುಂಜ ಸಾಂತಪ್ಪಗೌಡ, ಕಾಣಿಯೂರು ಪಾರ್ವತಿ, ಸವಣೂರು ಜಾನಕಿ, ಎಣ್ಮೂರು ಜಗದೀಶ ಗೌಡ, ಸುಬ್ರಹ್ಮಣ್ಯ ಚಂದ್ರಿಕಾರವರನ್ನು ಆಯ್ಕೆ ಮಾಡಲಾಯಿತು. ಆಲಂಕಾರಿನ ಮುಖ್ಯ ಶಿಕ್ಷಕರಾದ ನಿಂಗರಾಜು ಸ್ವಾಗತಿಸಿ, ಪ್ರಾಸ್ತವಿಕವಾಗಿ ಮಾತನಾಡಿದರು. ಬಂಟ್ರ ಶಾಲೆಯ ಮುಖ್ಯ ಶಿಕ್ಷಕರಾದ ಶೇಖರ್ ಧನ್ಯವಾದ ಸಮರ್ಪಿಸಿದರು.

Also Read  ಗೃಹರಕ್ಷಕ ದಳದ ಕಚೇರಿಯಲ್ಲಿ ಸೇವಾನಿವೃತ್ತರಾದ ಹರೀಶ್ ಆಚಾರ್ ಇವರಿಗೆ ಬಿಳ್ಕೊಡುಗೆ ಮತ್ತು ಸನ್ಮಾನ ಸಮಾರಂಭ.

error: Content is protected !!
Scroll to Top