ಆಕಸ್ಮಿಕ ಬೆಂಕಿ- ಸುಟ್ಟು ಭಸ್ಮವಾದ ಮೆಕ್ಕೆಜೋಳ ➤ ರೈತರು ಕಂಗಾಲು       

(ನ್ಯೂಸ್ ಕಡಬ) newskadaba.com ದಾವಣಗೆರೆ, ಡಿ. 26. ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ ಮೆಕ್ಕೆ ಜೋಳ ರಾಶಿ ಸುಟ್ಟು ಭಸ್ಮವಾದ ಘಟನೆ ಜಿಲ್ಲೆಯ ನ್ಯಾಮತಿ ತಾಲೂಕಿನ ಮುಸ್ಸೇನಾಳು ಗ್ರಾಮದಲ್ಲಿ ನಡೆದಿದೆ.

ಈ ಬಾರಿಯ ಮಳೆ ಅತಿವೃಷ್ಟಿಯಿಂದಾಗಿ ಕಷ್ಟಪಟ್ಟು ಒಳ್ಳೆಯ ಬೆಳೆ ಬೆಳೆದಿದ್ದ  ರೈತರು, ಮೆಕ್ಕೆ ಜೋಳವನ್ನು ಕೊಯ್ಲು ಮಾಡಿ ರಾಶಿ ಹಾಕಿದ್ದರು. ಆದರೆ ಆಕಸ್ಮಿಕವಾಗಿ ಕೊಯ್ಲು ಬೆಂಕಿಗಾಹುತಿಯಾಗಿದೆ. ಘಟನೆಯಿಂದಾಗಿ ಬೆಳೆ ನಾಶವಾಗಿದ್ದಲ್ಲದೇ ಜೊತೆಗೆ ಬಹಳಷ್ಟು ಅರಣ್ಯ ಪ್ರದೇಶವೂ ಹಾನಿಯಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ  ಆಗಮಿಸಿ, ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದ್ದಾರೆ

Also Read  IPL 2020: ಮುಂಬೈ ಇಂಡಿಯನ್ಸ್ ಮುಡಿಗೇರಿದ IPL ಟ್ರೋಫಿ

 

 

error: Content is protected !!
Scroll to Top