ಪೆರ್ನೆ: ಡಿ. 28, 29ರಂದು ತಾಜುಲ್ ಉಲಮಾ ಅನುಸ್ಮರಣೆ, ಬುರ್ದಾ ಮಜ್ಲಿಸ್ ಹಾಗೂ ಮದನೀಯಂ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಮಾಣಿ, ಡಿ. 26. ಇಲ್ಲಿನ ಸುನ್ನೀ ಸೆಂಟರ್ ಪೆರ್ನೆ ಇದರ ವತಿಯಿಂದ ಡಿ. 28 ಹಾಗೂ ಡಿ. 29 ದಂದು ಮಗ್ರಿಬ್ ಬಳಿಕ ಪೆರ್ನೆ ಜಂಕ್ಷನ್ ಸಮೀಪ ಇರುವ ಎ ಎಂ ಗಾರ್ಡನ್ ನಲ್ಲಿ ಬೃಹತ್ ತಾಜುಲ್ ಉಲಮಾ ಅನುಸ್ಮರಣೆ ಬುರ್ದಾ ಮಜ್ಲಿಸ್ ಮತ್ತು ಮದನೀಯಂ ಮಜ್ಲಿಸ್ ನಡೆಯಲಿದೆ.

ಬುಧವಾರದಂದು ತಾಜುಲ್ ಉಲಮಾ ಅನುಸ್ಮರಣೆ ಮತ್ತು ಬುರ್ದಾ ಮಜ್ಲಿಸ್ ಹಾಗೂ ಗುರುವಾರದಂದು ಅಬ್ಲಲ್ ಲತೀಫ್ ಸಖಾಫಿ ಕಾಂತಪುರಂರವರು ನಡೆಸಿಕೊಂಡು ಬರುತ್ತಿರುವ ಪ್ರಸಿದ್ಧ ಮದನೀಯಂ ಮಜ್ಲಿಸ್ ನಡೆಯಲಿದೆ. ತ್ಹಾಹಾತಂಙಳ್, ನಸೀಫ್ ಕ್ಯಾಲಿಕಟ್, ಶಾಹಿನ್ ಬಾಬು ನೇತೃತ್ವದಲ್ಲಿ ಬುರ್ದಾ ಮಜ್ಲಿಸ್ ನಡೆಯಲಿದೆ. ಸಾದಾತ್ ತಂಙಳ್ ಕರ್ವೇಲ್, ಶೈಖುನಾ ಪೆರ್ನೆ ಉಸ್ತಾದ್ (ಅಬ್ಬಾಸ್ ಸ‌ಅ‌ದಿ) ಸ್ವಾದಿಖ್ ಮುಈ‌ನೀ ಗಡಿಯಾರ್‌, ಜಿ.ಎಂ. ಕಾಮಿಲ್ ಸಖಾಫಿ ಸಹಿತ ಹಲವಾರು ಉಲಮಾ ಉಮರಾ ಸಯ್ಯಿದ್ ಗಳು ಭಾಗವಹಿಸಲಿರುವರು ಎಂದು ಪ್ರಕಟಣೆ ತಿಳಿಸಿದೆ.

Also Read  ಪುತ್ತೂರು :ನರಿಮೊಗರಿನಲ್ಲಿ ಫಾರ್ಮ್ ಕೋಳಿಗಳ ಕಳ್ಳತನ.!

error: Content is protected !!
Scroll to Top