ಪೊಲೀಸರ ಮೇಲೆ ಆರೋಪಿಗಳಿಂದ ಹಲ್ಲೆ   ➤ ಗುಂಡು ಹಾರಿಸಿ ಆರೋಪಿಯ ಬಂಧನ 

(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ. 26. ಅಪಹರಣ, ದರೋಡೆ ಮತ್ತು ಕಿಡ್ನಾಪ್ ಪ್ರಕರಣಗಳಲ್ಲಿ ಬೇಕಾಗಿದ್ದ ಆರೋಪಿಗಳನ್ನು ಬಂಧಿಸಲು ಹೋಗಿದ್ದ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದ ಇಬ್ಬರ ಕಾಲಿಗೆ ಗುಂಡು ಹಾರಿಸಿ ಪೊಲೀಸರು ಬಂಧಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಅಜಯ್ ಎಂಬಾತ ಇತ್ತೀಚೆಗೆ ಅಪಹರಣ ಮತ್ತು ಸುಲಿಗೆ ಪ್ರಕರಣದಲ್ಲಿ ಭಾಗಿಯಾಗಿ,  ತಲೆಮರೆಸಿಕೊಂಡಿದ್ದ ಎನ್ನಲಾಗಿದೆ. ಆರೋಪಿಗಳು ಹೊಸೂರು ರಸ್ತೆಯ ಸಿಂಗಸಂದ್ರ ಬಳಿ ಇದ್ದಾರೆ ಎಂಬ ಮಾಹಿತಿಯ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿದಾಗ ಪೇದೆ ರಂಗನಾಥ್‌ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ತಪ್ಪಿಸಿಕೊಂಡಿದ್ದ ವರುಣ್‌ ಅಲಿಯಾಸ್‌ ಕೆಂಚ ಹಾಗೂ ಸರಣಿ ಅಪಹರಣ ನಡೆಸಿ ತಲೆನೋವಾಗಿದ್ದ ಅಜಲ್‌ ಉರುಫ್‌ ಮೆಂಟಲ್‌ ಎಬಾತನನ್ನು ಬಂಧಿಸಲಾಗಿದೆ. ಈ ಇಬ್ಬರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಂಧನದ ವೇಳೆ ಆರೋಪಿಗಳು ಇನ್‌ಸ್ಪೆಕ್ಟರ್‌ ಮೇಲೆ ಹಲ್ಲೆಗೆ ಮುಂದಾಗಿದ್ದು, ಈ ಸಂದರ್ಭ ತಡೆಯಲು ಬಂದ ಸಿಬ್ಬಂದಿ ಶಂಕರ್‌ ಎಂಬವರು ಹಲ್ಲೆಗೊಳಗಾಗಿದ್ದಾರೆ. ಹಲ್ಲೆಯ ಸಂದರ್ಭ ಇನ್‌ಸ್ಪೆಕ್ಟರ್‌ ಸಿಬ್ಬಂದಿಯ ರಕ್ಷಣೆಗಾಗಿ  ಆರೋಪಿಯ ಎಡ ಮೊಣಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.

Also Read  ಸೈನಿಕನೋರ್ವನ ನಗದು ಹಣದ ಬ್ಯಾಗ ಕಳ್ಳತನ: ಆರೋಪಿ ಅರೆಸ್ಟ್..!

 

error: Content is protected !!
Scroll to Top