ಪುತ್ತೂರು: ಬಾಲಕಿಗೆ ಲೈಂಗಿಕ ಕಿರುಕುಳ   ➤ ಆರೋಪಿ ಅರೆಸ್ಟ್                        

(ನ್ಯೂಸ್ ಕಡಬ) newskadaba.com ಪುತ್ತೂರು, ಡಿ. 26. ಬಾಲಕಿಯೋರ್ವಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಕಾವು ಮಾಲಡ್ಕ ನಿವಾಸಿಯೋರ್ವನನ್ನು ಮಹಿಳಾ ಠಾಣಾ ಪೊಲೀಸರು ಬಂಧಿಸಿರುವ ಘಟನೆ ಪುತ್ತೂರಿನಲ್ಲಿ ವರದಿಯಾಗಿದೆ.

ಬಂಧಿತ ಆರೋಪಿಯನ್ನು ಕಾವು ಇಲ್ಲಿನ ನಿವಾಸಿ ತಕಿಯುದ್ದೀನ್ ಎಂದು ಗುರುತಿಸಲಾಗಿದೆ. ಈತ ಸಂತ್ರಸ್ಥ ಬಾಲಕಿಯ ತಂದೆಯ ಸ್ನೇಹಿತ ಎಂದು ತಿಳಿದುಬಂದಿದೆ. ಸಂತ್ರಸ್ತೆಯು ಶಾಲೆಗೆ ಹೋಗಲು ಮನೆಯಿಂದ ಬಸ್ ನಿಲ್ದಾಣಕ್ಕೆ ನಡೆದುಕೊಂಡು ಹೋಗುತ್ತಿದ್ದ ಸಂದರ್ಭ ಆಕೆಯನ್ನು ತಡೆದು ನಿಲ್ಲಿಸಿದ ಆರೋಪಿ ತನ್ನ ಜೊತೆಗೆ ಬೈಕ್ ನಲ್ಲಿ ಬರುವಂತೆ ಒತ್ತಾಯಿಸಿ ಕರೆದುಕೊಂಡು ಹೋಗಿರುವುದಾಗಿ ದೂರು ಸ್ವೀಕರಿಸಿದ ಪೊಲೀಸರು ಪೋಕ್ಸೋ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

Also Read  ಸ್ಮಶಾನಭೂಮಿ ಪ್ರತಿಭಟನೆ ಸುಖಾಂತ್ಯ- ಪಂಚಾಯತ್ ಬಳಿ ಜಾಗ ನಿಗದಿಪಡಿಸಿದ ಅಧಿಕಾರಿಗಳು

 

error: Content is protected !!
Scroll to Top